ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್‌ ಸ್ಪೀಡ್‌ ಆನ್‌ಲೈನ್‌ ಚೆಸ್‌: ನಿಹಾಲ್‌ ಸರಿನ್‌ಗೆ ಪ್ರಶಸ್ತಿ ಗರಿ

ಜೂನಿಯರ್‌ ಸ್ಪೀಡ್‌ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌
Last Updated 11 ಅಕ್ಟೋಬರ್ 2020, 13:06 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಯುವ ಚೆಸ್‌ ಪಟು ನಿಹಾಲ್‌ ಸರಿನ್‌ ಅವರು ಚೆಸ್‌ ಡಾಟ್‌ ಕಾಮ್‌ ಆಯೋಜಿಸಿದ್ದ ಜೂನಿಯರ್‌ ಸ್ಪೀಡ್‌ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು 18–7ರಿಂದ ರಷ್ಯಾದ ಅಲೆಕ್ಸಿ ಸರಾನ ಅವರನ್ನು ಮಣಿಸಿದರು.

ಚಾಂಪಿಯನ್‌ ಆಗುವುದರೊಂದಿಗೆ 16 ವರ್ಷದ ನಿಹಾಲ್‌ ₹ 6 ಲಕ್ಷ 40 ಸಾವಿರ ನಗದು ಜೇಬಿಗಿಳಿಸಿದರು. ಅಲ್ಲದೆ ವಿಶ್ವದ ಶ್ರೇಷ್ಠ ಆಟಗಾರರು ಪಾಲ್ಗೊಳ್ಳುವ 2020ರ ಸ್ಪೀಡ್‌ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಅರ್ಹತೆ ಗಳಿಸಿದರು.

ಪ್ರಶಸ್ತಿ ಗೆಲುವಿನ ಹಾದಿಯಲ್ಲಿ ಸರಿನ್‌, ಅಮೆರಿಕದ ಆ್ಯಂಡ್ರ್ಯೂಟ್ಯಾಂಗ್‌, ಆಸ್ಟ್ರೇಲಿಯಾದ ಆ್ಯಂಟನ್‌ ಸ್ಮಿರ್ನೊವ್ ಹಾಗೂ ಆರ್ಮೇನಿಯಾದ ಹೈಕ್‌ ಮಾರ್ಟಿರೊಸ್ಯಾನ್ ಅವರಿಗೆ ಸೋಲುಣಿಸಿದ್ದರು.

2017ರಲ್ಲಿ ಮ್ಯಾಗ್ನಸ್‌ ಕಾರ್ಲ್‌ಸನ್‌, 2018 ಹಾಗೂ 2019ರಲ್ಲಿ ಹಿಕಾರು ನಕಮುರಾ ಅವರು ಸ್ಪೀಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

’ನಿಹಾಲ್‌ ವಿಶ್ವದ ಅತ್ಯಂತ ಚುರುಕಿನ ಆಟಗಾರರಲ್ಲಿ ಒಬ್ಬ. ಈ ಫಲಿತಾಂಶ ಇದನ್ನು ಸಾಬೀತುಪಡಿಸಿದೆ‘ ಎಂದು ಐದು ಬಾರಿಯ ವಿಶ್ವ ಚೆಸ್‌ ಚಾಂಪಿಯನ್‌ ವಿಶ್ವನಾಥನ್ ಆನಂದ್‌ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

10 ವರ್ಷದೊಳಗಿನವರ ವಿಭಾಗದ ಮಾಜಿ ಚಾಂಪಿಯನ್‌ ನಿಹಾಲ್‌, ಸದ್ಯ ನಡೆಯುತ್ತಿರುವ ಏಷ್ಯನ್‌ ಆನ್‌ಲೈನ್‌ ನೇಷನ್ಸ್ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT