ನವದೆಹಲಿ: ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಪದಕಗಳ ವಿಜೇತ ಭಾರತ ಹಾಕಿ ತಂಡದಲ್ಲಿ ಆಡಿದ್ದ ವರಿಂದರ್ ಸಿಂಗ್ (75) ಜಲಂಧರ್ನಲ್ಲಿ ಮಂಗಳವಾರ ನಿಧನರಾದರು.

ಭಾರತ ತಂಡವು ಕ್ವಾಲಾಲಂಪುರ ನಡೆದ 1975ರ ವಿಶ್ವಕಪ್ನ ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು 2–1ರಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತ್ತು. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಜಯಿಸಿದ ಏಕೈಕ ಚಿನ್ನ ಇದು. ಈ ತಂಡವನ್ನು ವರಿಂದರ್ ಪ್ರತಿನಿಧಿಸಿದ್ದರು.

1972ರ ಮ್ಯೂನಿಕ್ ಒಲಿಂಪಿಕ್ಸ್ನಲ್ಲಿ ಕಂಚು ಮತ್ತು 1973ರಲ್ಲಿ ಆ್ಯಮ್ಸ್ಟರ್ಡ್ಯಾಮ್ ವಿಶ್ವಕಪ್ನಲ್ಲಿ ಬೆಳ್ಳಿ ಜಯಿಸಿದ್ದ ತಂಡದಲ್ಲಿಯೂ ಅವರು ಆಡಿದ್ದರು. 1974 ಮತ್ತು 1978ರ ಏಷ್ಯನ್ ಗೇಮ್ಸ್ಗಳಲ್ಲಿ ಬೆಳ್ಳಿ ವಿಜೇತ ಮತ್ತು 1975ರ ಮಾಂಟ್ರಿಯಲ್ ಒಲಿಂಪಿಕ್ಸ್ಗಳಲ್ಲಿ ಆಡಿದ್ದ ತಂಡದಲ್ಲಿ ವರಿಂದರ್ ಇದ್ದರು.

2007ರಲ್ಲಿ ವರಿಂದರ್ ಅವರಿಗೆಜೀವಮಾನ ಸಾಧನೆಗಾಗಿ ನೀಡುವ ಪ್ರತಿಷ್ಠಿತ ಧ್ಯಾನ್ಚಂದ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವರಿಂದರ್ ಅವರ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.