ಮಂಗಳವಾರ, ಮಾರ್ಚ್ 28, 2023
23 °C

ಸುರಕ್ಷಿತ ಒಲಿಂಪಿಕ್ಸ್ ಆಯೋಜನೆ: ಬಾಕ್ ಅಭಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್‌ ಕ್ರೀಡಾಕೂಟ ನಡೆಸುವುದರಿಂದ ಜಪಾನ್ ಜನತೆಗೆ ಯಾವುದೇ ಅಪಾಯ ಎದುರಾಗದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮುಖ್ಯಸ್ಥ ಥಾಮಸ್‌ ಬಾಕ್ ಪ್ರತಿಪಾದಿಸಿದ್ದಾರೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆತಂಕಗೊಂಡ ಜನತೆಗೆ ಅವರು ಈ ಮಾತು ಹೇಳಿದ್ದಾರೆ.

ಸೋಂಕು ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ರಾಜಧಾನಿ ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಇದೆ. ಹೀಗಾಗಿ ಒಲಿಂಪಿಕ್ಸ್ ವೀಕ್ಷಿಸಲು ಅಲ್ಲಿನ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ.

ಹೆಚ್ಚಿನ ಅಥ್ಲೀಟ್‌ಗಳು ಜಪಾನ್‌ಗೆ ಆಗಮಿಸಿ ಕ್ರೀಡಾಗ್ರಾಮದಲ್ಲಿ ಸೇರುತ್ತಿದ್ದಾರೆ. ಕೂಟವನ್ನು ಸುರಕ್ಷಿತವಾಗಿ ಆಯೋಜಿಸುವ ಭರವಸೆಯನ್ನು ಥಾಮಸ್‌ ಬಾಕ್‌ ನೀಡಿದ್ದಾರೆ.

‘ವೈರಸ್‌ ವಿರುದ್ಧದ ಹೋರಾಟಕ್ಕೆ ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಜಪಾನ್‌ ನಾಗರಿಕರಿಗೆ ಯಾವುದೇ ಅಪಾಯವನ್ನುಂಟುಮಾಡದಂತೆ ಕೂಟ ಆಯೋಜನೆಗೆ ಬದ್ಧರಾಗಿದ್ದೇವೆ‘ ಎಂದು ಪ್ರಧಾನಿ ಯೋಶಿಹಿದೆ ಸುಗಾ ಅವರನ್ನು ಭೇಟಿಯಾದ ಬಳಿಕ ಬಾಕ್‌ ಸುದ್ದಿಗಾರರಿಗೆ ತಿಳಿಸಿದರು. 

‘ಕ್ರೀಡಾಗ್ರಾಮದಲ್ಲಿರುವ ಶೇಕಡಾ 85ರಷ್ಟು ನಾಗರಿಕರು ಮತ್ತು ಇಲ್ಲಿಗೆ ಆಗಮಿಸಲಿರುವ ಐಒಸಿಯ ಬಹುತೇಕ ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಜಪಾನ್‌ ಎದುರಿಸುವಂತಹ ಸವಾಲುಗಳಿಗೆ ಮುಖಾಮುಖಿಯಾಗಿ ಇಲ್ಲಿಗೆ ಬರುತ್ತಿರುವ ಅಥ್ಲೀಟ್‌ಗಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು‘ ಎಂದು ಅವರು ಕೋರಿಕೊಂಡರು.

ಟೋಕಿಯೊ ನಗರದಲ್ಲಿ ಬುಧವಾರ 1100ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜನವರಿ 22ರ ಬಳಿಕ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಇವು.

ಇದೇ 23ರಿಂದ ಒಲಿಂಪಿಕ್ಸ್ ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು