ಸೋಮವಾರ, ಜೂನ್ 21, 2021
21 °C

ಎಫ್‌ಐಎಚ್‌ ಅಥ್ಲೆಟಿಕ್ಸ್ ಸಮಿತಿಗೆ ಶ್ರೀಜೇಶ್ ಮರು ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಹಾಕಿ ತಂಡದ ಅನುಭವಿ ಗೋಲ್‌ಕೀಪರ್ ಪಿ.ಆರ್‌.ಶ್ರೀಜೇಶ್ ಅವರು ಅಂತರರಾಷ್ಟ್ರೀಯ ಹಾಕಿ ಫಡೆರೇಷನ್‌ನ (ಎಫ್‌ಐಎಚ್‌) ಅಥ್ಲೆಟಿಕ್ಸ್ ಸಮಿತಿಯ ಸದಸ್ಯರಾಗಿ ಗುರುವಾರ ಮರು ಆಯ್ಕೆಯಾಗಿದ್ದಾರೆ.

ಈ ಕುರಿತು ಶುಕ್ರವಾರ ಮಾತನಾಡಿರುವ 33 ವರ್ಷದ ಶ್ರೀಜೇಶ್‌ ‘ಸಹ ಆಟಗಾರರ ಧ್ವನಿಯಾಗಲು ಮತ್ತೊಂದು ಅವಕಾಶ ಸಿಕ್ಕಿದೆ‘ ಎಂದು ಹೇಳಿದ್ದಾರೆ. ವರ್ಚುವಲ್ ಮೂಲಕ ನಡೆದ ಎಫ್‌ಐಎಚ್‌ನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಶ್ರೀಜೇಶ್ ಸೇರಿದಂತೆ ನಾಲ್ಕು ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ರಾಷ್ಟ್ರೀಯ ತಂಡವನ್ನು ನಾಯಕರಾಗಿಯೂ ಮುನ್ನಡೆಸಿರುವ ಶ್ರೀಜೇಶ್‌ ಅವರು, 2017ರಿಂದ ಎಫ್‌ಐಎಚ್‌ನ ಈ ಸಮಿತಿಯಲ್ಲಿದ್ದಾರೆ.

‘ಕಳೆದ ನಾಲ್ಕು ವರ್ಷಗಳಲ್ಲಿ ನಾನು ಒಬ್ಬ ಆಟಗಾರನಾಗಿ ಬೆಳೆಯಲು ಅಷ್ಟೇ ಅಲ್ಲದೆ, ನನ್ನ ಸಹ ಆಟಗಾರರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು, ಗಮನಿಸಲು ಮತ್ತು ವ್ಯಕ್ತಪಡಿಸಲು ಒಂದು ಅನನ್ಯ ಅವಕಾಶವನ್ನು ಎಫ್‌ಐಹೆಚ್ ಅಥ್ಲೆಟಿಕ್ಸ್ ಸಮಿತಿತು ಒದಗಿಸಿದೆ‘ ಎಂದು ಶ್ರೀಜೇಶ್ ಹೇಳಿದರು.

ಶ್ರೀಜೇಶ್ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ಸಲ್ಲಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು