ಮಂಗಳವಾರ, ಜನವರಿ 31, 2023
19 °C

ವಿಶ್ವಕ‍ಪ್‌ ಹಾಕಿ: ಭಾರತ ಗೆದ್ದರೆ ಆಟಗಾರರಿಗೆ ತಲಾ ₹ 1 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಗೆದ್ದರೆ ತಂಡದ ಆಟಗಾರರಿಗೆ ತಲಾ ₹1 ಕೋಟಿ ನಗದು ಬಹುಮಾನ ನೀಡಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಘೋಷಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯ ಪಂದ್ಯಗಳು ನಡೆಯುವ ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಿರುವ ‘ವಿಶ್ವಕಪ್‌ ಗ್ರಾಮ’ವನ್ನು ಅವರು ಗುರುವಾರ ಉದ್ಘಾಟಿಸಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿವಿಧ ದೇಶಗಳ ಆಟಗಾರರ ವಾಸ್ತವ್ಯಕ್ಕೆ ‘ವಿಶ್ವಕಪ್‌ ಗ್ರಾಮ’ವನ್ನು ದಾಖಲೆಯ 9 ತಿಂಗಳಲ್ಲಿ ನಿರ್ಮಿಸಲಾಗಿದೆ. 225 ಕೊಠಡಿಗಳು ಒಳಗೊಂಡಂತೆ ಎಲ್ಲ ಸೌಲಭ್ಯಗಳು ಇಲ್ಲಿವೆ.

‘ನಮ್ಮ ತಂಡ ವಿಶ್ವಕಪ್‌ ಗೆದ್ದರೆ ಎಲ್ಲ ಆಟಗಾರರಿಗೆ ತಲಾ ₹1 ಕೋಟಿ ನಗದು ಬಹುಮಾನ ನೀಡಲಾಗುವುದು. ಭಾರತ ತಂಡ ಶ್ರೇಷ್ಠ ಆಟವಾಡಲಿ ಎಂದು ಶುಭಹಾರೈಸುತ್ತೇನೆ’ ಎಂದು ಪಟ್ನಾಯಕ್‌ ಹೇಳಿದರು.

ಭಾರತವು ವಿಶ್ವಕಪ್‌ ಗೆದ್ದರೆ ಆಟಗಾರರಿಗೆ ತಲಾ ₹ 25 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ ₹ 5 ಲಕ್ಷ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಈ ಹಿಂದೆ ಘೋಷಿಸಿತ್ತು. ವಿಶ್ವಕಪ್‌ ಟೂರ್ನಿ ಇದೇ ತಿಂಗಳ 13 ರಿಂದ 29ರ ವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು