ಸೋಮವಾರ, ಸೆಪ್ಟೆಂಬರ್ 26, 2022
24 °C

ಗೆಲುವನ್ನು ಆಚರಿಸಿ, ಕ್ಷಮೆ ಕೇಳಬೇಡಿ: ಪೂಜಾ ಗೆಹಲೋತ್‌ಗೆ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನೀವು ಪದಕ ಗೆದ್ದಿರುವುದಕ್ಕೆ ಸಂಭ್ರಮಾಚರಿಸಿ, ಕ್ಷಮೆ ಕೇಳಬೇಡಿ’ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಪೂಜಾ ಗೆಹಲೋತ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯದ ಮಾತುಗಳನ್ನಾಡಿದ್ದಾರೆ.

ಪೂಜಾ ಗೆಹಲೋತ್‌ ಅವರು ಮಹಿಳೆಯರ 50 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದಿದ್ದ ಸ್ಪರ್ಧೆಯಲ್ಲಿ ಅವರು 12–2 ರಲ್ಲಿ ಕ್ರಿಸ್ಟೆಲ್‌ ಲೆಮೊಫಾಕ್‌ ವಿರುದ್ಧ ಜಯಿಸಿದ್ದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪೂಜಾ ಗೆಹಲೋತ್‌, ‘ದೇಶ ಬಾಂಧವರಲ್ಲಿ ಕ್ಷಮೆ ಕೋರುತ್ತೇನೆ. ಇಲ್ಲಿ ರಾಷ್ಟ್ರಗೀತೆ ಹಾಡುವಂತಾಗಬೇಕು ಎಂದು ನಾನು ಆಶಿಸಿದ್ದೆ. ನನ್ನ ತಪ್ಪುಗಳಿಂದ ನಾನು ಪಾಠ ಕಲಿಯಲಿದ್ದೇನೆ, ಆ ಬಗ್ಗೆ ಹೆಚ್ಚಿನ ಶ್ರಮ ವಹಿಸಲಿದ್ದೇನೆ’ ಎಂದು ಭಾವುಕರಾಗಿ ಹೇಳಿದ್ದರು.

ಈ ಕುರಿತು ‘ಎಎನ್‌ಐ’ ಸುದ್ದಿ ಸಂಸ್ಥೆ ವಿಡಿಯೊ ತುಣುಕಿನೊಂದಿಗೆ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೋದಿ, ‘ಪೂಜಾ, ನೀವು ಪದಕ ಗೆದ್ದಿರುವುದು ಸಂಭ್ರಮ ಆಚರಿಸಲು, ಕ್ಷಮೆ ಕೇಳುವುದಕ್ಕಲ್ಲ. ನಿಮ್ಮ ಜೀವನ ಗಾಥೆ ನಮಗೆಲ್ಲ ಸ್ಫೂರ್ತಿದಾಯಕ. ನಿಮ್ಮ ಯಶಸ್ಸು ನಮಗೆ ಸಂತಸ ತಂದಿದೆ. ಮುಂದೆ ಮಹತ್ತರವಾದದ್ದನ್ನು ಸಾಧಿಸಲಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು