ಸೋಮವಾರ, ಏಪ್ರಿಲ್ 6, 2020
19 °C

ಕೋವಿಡ್‌ ಭೀತಿ: ನಿಗದಿಯಂತೆ ಟೋಕಿಯೊ ಒಲಿಂಪಿಕ್ಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗಳು ನಿಗದಿಯಂತೆ ನಡೆಯಲಿವೆ ಎಂದು ಕೂಟದ ಸಂಘಟಕರು ಹೇಳಿದ್ದಾರೆ. ಕೊರೊನಾ ವೈರಸ್‌ ಪಿಡುಗಿನ ‘ಕಳವಳ’ ತಮಗಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.

ಸಂಘಟನಾ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರೊಬ್ಬರು, ಕೊರೊನಾ ವೈರಸ್‌ ಪಿಡುಗಿನ ಬಗ್ಗೆ ಪ್ರಸ್ತಾಪಿಸಿ, ಈಗಿನ ಪರಿಸ್ಥಿತಿಯಲ್ಲಿ ಕ್ರೀಡೆಯನ್ನು ಎರಡು ವರ್ಷ ಮುಂದೂಡುವುದು ಉತ್ತಮ ಆಯ್ಕೆ ಎಂದು ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದರು.

ಇದರ ಬೆನ್ನಲ್ಲೇ ಟೋಕಿಯೊ 2020 ಅಧ್ಯಕ್ಷ ಯೊಶಿರೊ ಮೋರಿ ಈ ಹೇಳಿಕೆ ನೀಡಿದ್ದಾರೆ. ಒಲಿಂಪಿಕ್‌ ಕೂಟವನ್ನು ಮುಂದೂಡುವುದು ಅಥವಾ ರದ್ದು ಮಾಡುವುದು ‘ಊಹೆಗೆ ನಿಲುಕದ ಮಾತು’ ಎಂದು ಜಪಾನ್‌ನ ಒಲಿಂಪಿಕ್ಸ್‌ ಸಚಿವೆ ಸೀಕೊ ಹಾಶಿಮೊಟೊ, ಸಂಸದೀಯ ಸಮಿತಿ ಮುಂದೆ ಹೇಳಿದ್ದು, ಮೋರಿ ಅವರ ಮಾತುಗಳು ಇದನ್ನು  ಸಮರ್ಥಿಸುವಂತಿದೆ.

ವಿಶ್ವ ಆರೋಗ್ಯ ಸಂಸ್ಥೆಯು, ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮತ್ತು ಟೋಕಿಯೊದ ಸಂಘಟಕರೊಂದಿಗೆ ಸಮಾಲೋಚನೆಯಲ್ಲಿದ್ದು, ‘ಮುಖ್ಯ ವಿಷಯ’ಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

‘ಒಲಿಂಪಿಕ್‌ ಕ್ರೀಡೆಗಳನ್ನು ಯೋಜನೆಯಂತೆ ನಡೆಸುವುದು ಸೂಕ್ತ. ಆದರೆ ಪರ್ಯಾಯ ಯೋಜನೆಯೂ ನಮ್ಮ ಮುಂದಿರಬೇಕು’ ಎಂದು ಸಂಘಟನಾ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯ ಹರಾಯುಕಿ ತಕಾಹಶಿ, ಜಪಾನ್‌ನ ‘ಅಸಾಹಿ ಶಿಂಬುನ್‌’ ಪತ್ರಿಕೆಗೆ ತಿಳಿಸಿದ್ದರು.

‘ಕೊರೊನಾ ವೈರಸ್‌ ಜಾಗತಿಕ ಪಿಡುಗಾಗಿದೆ. ಜಪಾನ್‌ನಲ್ಲಿ ಸಮಸ್ಯೆಯಿಲ್ಲ ಎಂದು ನಾವು ಒಲಿಂಪಿಕ್ಸ್‌ ನಡೆಸುವಂತಿಲ್ಲ’ ಎಂದು ಅವರು ತಿಳಿಸಿದ್ದರು.

‘ಕ್ರೀಡೆ ನಿಗದಿಯಂತೆ ನಡೆಯಲಿದೆ ಎಂದು ಐಒಸಿ ಹೇಳುತ್ತಾ ಬಂದಿದೆ’ ಎಂದು ಹೇಳಿಕೆಯಲ್ಲಿ ತಿಳಿಸುವ ಮೂಲಕ ಸಂಘಟಕರು ತಕಾಹಶಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.

‘ಅಥ್ಲೀಟುಗಳು, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾ ಮೇಳಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ರದ್ದುಪಡಿಸುವುದು ಅಥವಾ ಮುಂದೂಡುವುದು ಅವಾಸ್ತವಿಕವಾಗುತ್ತದೆ’ ಎಂದು ಸಚಿವೆ ಹೇಳಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಕೈಗೊಳ್ಳಲಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು