ಗುರುವಾರ , ಅಕ್ಟೋಬರ್ 24, 2019
21 °C

ಪ್ರೊ ಕಬಡ್ಡಿ: ಪವನ್ ವೀರಾವೇಶ; ಬುಲ್ಸ್‌ಗೆ ಜಯ

Published:
Updated:

ಪಂಚಕುಲಾ: ಪವನ್ ಶೆರಾವತ್ ಅವರ ತೋಳ್ಬಲಕ್ಕೆ ಬೆಂಗಳೂರು ಬುಲ್ಸ್‌ ತಂಡವು ಬುಧವಾರ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜಯಭೇರಿ ಬಾರಿಸಿತು.

39 ಪಾಯಿಂಟ್ಸ್‌ ಸೂರೆ ಮಾಡಿದ ಪವನ್ ಆಟದ ಬಲದಿಂದ ಬೆಂಗಳೂರು ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 59–36ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಹಣಿಯಿತು.

ಇದರಿಂದಾಗಿ ಹಾಲಿ ಚಾಂಪಿಯನ್ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗುಳಿದಿದೆ.

ಬುಲ್ಸ್‌ ತಂಡದ ಮಹೇಂದರ್ ಸಿಂಗ್ ಈ ಋತುವಿನಲ್ಲಿ 50 ರೇಡಿಂಗ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು.

ಸ್ಟೀಲರ್ಸ್‌ ತಂಡದ ವಿಕಾಸ್‌ ಖಂಡೋಲಾ ಅವರು ಪ್ರೊ ಕಬಡ್ಡಿಯಲ್ಲಿ 400 ಪಾಯಿಂಟ್ಸ್‌ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ  ಯು ಮುಂಬಾ ತಂಡವು 30–26ರಿಂದ ಪಟ್ನಾ ಪೈರೇಟ್ಸ್ ತಂಡದ ವಿರುದ್ಧ ಗೆದ್ದಿತು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)