ಶನಿವಾರ, ಡಿಸೆಂಬರ್ 3, 2022
21 °C
ಮಿಂಚಿದ ಭರತ್, ನೀರಜ್‌

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ರೇಡರ್‌ಗಳಾದ ಭರತ್‌ ಮತ್ತು ನೀರಜ್‌ ನರ್ವಾಲ್‌ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಭರ್ಜರಿ ಗೆಲುವು ಪಡೆದರು.

ಬಾಲೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬುಲ್ಸ್‌ 49–38 ರಲ್ಲಿ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು.

ಸತತ ಮೂರನೇ ಗೆಲುವು ಪಡೆದ ಬೆಂಗಳೂರಿನ ತಂಡ ಪಾಯಿಂಟ್ಸ್‌ಗಳನ್ನು ಅರ್ಧಶತಕದ ಗಡಿ ದಾಟಿಸಿತು. ಒಟ್ಟು 51 ಪಾಯಿಂಟ್ಸ್‌ಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು.

ರೇಡಿಂಗ್‌ನಲ್ಲಿ ಒಂದರ ಮೇಲೊಂ ದರಂತೆ ಪಾಯಿಂಟ್ಸ್‌ ಕಲೆಹಾಕಿದ ಭರತ್‌ (17 ಪಾಯಿಂಟ್ಸ್‌), ಬುಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ನೀರಜ್‌ 13 ಪಾಯಿಂಟ್ಸ್‌ ಗಳಿಸಿದರು.

ಟೈಟನ್ಸ್‌ ತಂಡದ ಸಿದ್ಧಾರ್ಥ್‌ ಅವರು 18 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಮಿಂಚಿದರು. ಎರಡನೇ ಅವಧಿಯಲ್ಲಿ ಅವರಿಗೆ ಇತರರಿಂದ ತಕ್ಕ ಸಾಥ್‌ ಸಿಗಲಿಲ್ಲ.

ಪ್ಯಾಂಥರ್ಸ್‌ಗೆ ಜಯ: ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ 32-22 ರಲ್ಲಿ ಯು ಮುಂಬಾ ತಂಡವನ್ನು ಪರಾಭವಗೊಳಿಸಿತು.

ಪ್ರಥಮಾರ್ಧದಲ್ಲಿ 19–11 ರಲ್ಲಿ ಮುನ್ನಡೆಯಲ್ಲಿದ್ದ ಜೈಪುರ ತಂಡದ ಪರ ಅರ್ಜುಲ್‌ ದೇಶ್ವಾಲ್‌ ಅವರು 13 ಪಾಯಿಂಟ್ಸ್‌ ಗಳಿಸಿ ಮಿಂಚಿದರು.

ಇಂದಿನ ಪಂದ್ಯಗಳು
ಪಟ್ನಾ ಪೈರೇಟ್ಸ್‌– ತಮಿಳ್‌ ತಲೈವಾಸ್
* ದಬಾಂಗ್‌ ಡೆಲ್ಲಿ– ಯು.ಪಿ.ಯೋಧಾಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು