ಪುಣೆ: ಸಚಿನ್ ಅವರ ಅಮೋಘ ರೇಡಿಂಗ್‌ನ ನೆರವಿನಿಂದ ಪಟ್ನಾ ಪೈರೇಟ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 3ನೇ ಜಯ ಪಡೆದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಪೈರೇಟ್ಸ್ 34–31 ರಲ್ಲಿ ಯು ಮುಂಬಾ ತಂಡವನ್ನು ಮಣಿಸಿತು. ಸಚಿನ್ 12 ಪಾಯಿಂಟ್ಸ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಪ್ರಥಮಾರ್ಧ ಕೊನೆಗೊಂಡಾಗ 13–18 ರಲ್ಲಿ ಹಿನ್ನಡೆಯಲ್ಲಿದ್ದ ಪೈರೇಟ್ಸ್ ದ್ವಿತೀಯಾರ್ಧದಲ್ಲಿ ಅಮೋಘ ರೀತಿಯಲ್ಲಿ ಪುಟಿದೆದ್ದು ನಿಂತಿತು. ಸಚಿನ್ ಅವರು ಎದುರಾಳಿ ತಂಡವನ್ನು ಕಾಡಿದರು. ಅವರಿಗೆ ತಕ್ಕ ಬೆಂಬಲ ನೀಡಿದ ಸುನಿಲ್ 6 ಪಾಯಿಂಟ್ಸ್ ತಂದಿತ್ತರು. ಮುಂಬಾ ತಂಡದ ಸತತ ಮೂರು ಪಂದ್ಯಗಳ ಗೆಲುವಿನ ಓಟಕ್ಕೆ ತಡೆ ಬಿದ್ದಿತು.

ಗೆಲುವಿನ ಹಾದಿಗೆ ಮರಳಿದ ಪ್ಯಾಂಥರ್ಸ್: ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 45–40ರಲ್ಲಿ ದಬಾಂಬ್ ಡೆಲ್ಲಿ ತಂಡ ವನ್ನು ಸೋಲಿಸಿತು. ಸತತ 3 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಪ್ಯಾಂಥರ್ಸ್ ಕೊನೆಗೂ ಗೆಲುವಿನ ಹಾದಿಗೆ ಮರಳಿತು. 16 ಪಾಯಿಂಟ್ಸ್ ಗಳಿಸಿದ ಅರ್ಜುನ್ ದೇಶ್ವಾಲ್, ಪ್ಯಾಂಥರ್ಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ರಾಹುಲ್ ಚೌಧರಿ ಆರು ಪಾಯಿಂಟ್ಸ್ ತಂದುಕೊಟ್ಟರು. ಪ್ರಥಮಾರ್ಧದ ಆಟದಲ್ಲಿ ಜೈಪುರದ ತಂಡ 28–19 ರಲ್ಲಿ ಮೇಲುಗೈ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ಆಶು ಮಲಿಕ್ (15) ಮತ್ತು ನವೀನ್ ಕುಮಾರ್ (12) ಚುರುಕಿನ ಆಟದ ನೆರವಿನಿಂದ ದಬಾಂಗ್ ಹೋರಾಟ ನಡೆಸಿದರೂ ಗೆಲುವು ಒಲಿಯಲಿಲ್ಲ.

ಇಂದಿನ ಪಂದ್ಯಗಳು

ಗುಜರಾತ್ ಜೈಂಟ್ಸ್– ಬೆಂಗಾಲ್ ವಾರಿಯರ್ಸ್

ತಮಿಳ್ ತಲೈವಾಸ್– ತೆಲುಗು ಟೈಟನ್ಸ್

ಹರಿಯಾಣ ಸ್ಟೀಲರ್ಸ್– ಯು.ಪಿ. ಯೋಧಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.