ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಆಯ್ಕೆ ಸಮಿತಿಗೆ ಪಿ.ಟಿ. ಉಷಾ, ರಾಂಧ್ವಾ ನೇಮಕ

Last Updated 24 ಮಾರ್ಚ್ 2021, 13:42 IST
ಅಕ್ಷರ ಗಾತ್ರ

ನವದೆಹಲಿ: ದಿಗ್ಗಜ ಅಥ್ಲೀಟ್‌ಗಳಾದ ಪಿ.ಟಿ. ಉಷಾ ಹಾಗೂ ಗುರುಬಚನ್ ಸಿಂಗ್ ರಾಂಧ್ವಾ ಅವರನ್ನು ಕ್ರಮವಾಗಿ ಜೂನಿಯರ್ ಮತ್ತು ಸೀನಿಯರ್ ಆಯ್ಕೆ ಸಮಿತಿಗಳಿಗೆ ಮುಖ್ಯಸ್ಥರಾಗಿ ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಬುಧವಾರ ನೇಮಿಸಿದೆ.

56 ವರ್ಷದ ಉಷಾ ಅವರು ಏಷ್ಯನ್ ಗೇಮ್ಸ್‌ನ 100, 200, 400 ಹಾಗೂ 4X400 ಮೀಟರ್ ವಿಭಾಗಗಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದರು. 1984ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 400 ಮೀ. ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.

ಸೋಮ ಬಿಸ್ವಾಸ್‌, ಆನಂದ್ ಮೆಂಜೆಸ್‌, ಸತ್ಬೀರ್ ಸಿಂಗ್, ಸಂದೀಪ್ ಸರ್ಕಾರಿಯಾ, ಸುನಿತಾ ರಾಣಿ, ರಾಮಚಂದ್ರನ್‌, ಜೋಸೆಫ್ ಅಬ್ರಹಾಂ, ಹರ್‌ವಂತ್ ಕೌರ್‌, ಎಂ.ಡಿ. ವಸ್ಲಾಮ ಹಾಗೂ ಕಮಲ್ ಅಲಿ ಖಾನ್ ಜೂನಿಯರ್ ಸಮಿತಿಯ ಸದಸ್ಯರಾಗಿದ್ದಾರೆ.

81 ವರ್ಷದ ರಾಂಧ್ವಾ 1962ರ ಏಷ್ಯನ್ ಗೇಮ್ಸ್‌ನ ಡೆಕಾಥ್ಲಾನ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 1964ರ ಟೋಕಿಯೊ ಒಲಿಂಪಿಕ್ಸ್‌ನ 110 ಮೀ. ಹರ್ಡಲ್ಸ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರು. ಅವರ ನೇತೃತ್ವದ ಸೀನಿಯರ್ ಆಯ್ಕೆ ಸಮಿತಿಯಲ್ಲಿ ಮಾಜಿ ಮುಖ್ಯ ಕೋಚ್‌ ಬಹಾದೂರ್ ಸಿಂಗ್‌, ಬಹಾದೂರ್‌ ಸಿಂಗ್‌ ಸಗ್ಗು, ಕೃಷ್ಣ ಪೂನಿಯಾ, ಜೋತಿರ್ಮಯಿ ಸಿಕ್ದರ್‌, ಉದಯ ಪ್ರಭು, ಪ್ರವೀಣ್ ಜಾಲಿ ಮತ್ತು ಗೋಪಾಲ್ ಸೈನಿ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT