ಬುಧವಾರ, ಡಿಸೆಂಬರ್ 7, 2022
22 °C

ಭಾರತ ಒಲಿಂಪಿಕ್ ಸಮಿತಿ ಚುನಾವಣೆ: ಉಷಾ, ಸುಮಾ ಶಿರೂರುಗೆ ಮತದಾನ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಥ್ಲೀಟ್‌ ಪಿ.ಟಿ.ಉಷಾ, ಒಲಿಂಪಿಕ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್‌ ದತ್‌, ಶೂಟರ್‌ ಸುಮಾ ಶಿರೂರು ಸೇರಿದಂತೆ ಉನ್ನತ ಸಾಧನೆ ಮಾಡಿದ ಎಂಟು ಕ್ರೀಡಾಪಟುಗಳಿಗೆ ಡಿ.10 ರಂದು ನಡೆಯಲಿರುವ ಭಾರತ ಒಲಿಂಪಿಕ್ ಸಮಿತಿಯ (ಐಒಎ) ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಹೊಸದಾಗಿ ರಚನೆಯಾಗಿರುವ ಅಥ್ಲೀಟ್‌ಗಳ ಸಮಿತಿಯು ‘ಉನ್ನತ ಸಾಧನೆ’ ಮಾಡಿದ ಎಂಟು ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಎಂ.ಎಂ.ಸೌಮ್ಯಾ (ಹಾಕಿ), ರೋಹಿತ್‌ ರಾಜ್‌ಪಾಲ್‌ (ಟೆನಿಸ್‌), ಅಖಿಲ್‌ ಕುಮಾರ್ (ಬಾಕ್ಸಿಂಗ್), ಅಪರ್ಣಾ ಪೋಪಟ್ (ಬ್ಯಾಡ್ಮಿಂಟನ್‌) ಮತ್ತು ಡೋಲಾ ಬ್ಯಾನರ್ಜಿ (ಆರ್ಚರಿ) ಅವರು ಈ ಗೌರವ ಪಡೆದ ಇತರ ಐವರು ಕ್ರೀಡಾಪಟುಗಳಾಗಿದ್ದಾರೆ.

ಐಒಎ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿ ವಹಿಸಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್ ಅವರು ಎಂಟು ಮಂದಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ‘ಅಥ್ಲೀಟ್‌ಗಳ ಸಮಿತಿಯು ಎಂಟು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಎಲ್‌.ನಾಗೇಶ್ವರ ರಾವ್‌ ಅವರು ಆ ಹೆಸರುಗಳನ್ನು ಪ್ರಕಟಿಸಲಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು