ದಾವಣಗೆರೆ: ಭೋಪಾಲ್ನಲ್ಲಿ ಸೇನಾಧಿಕಾರಿಯಾಗಿರುವ ಧಾರವಾಡ ಸಮೀಪದ ಸಿಂಗನಹಳ್ಳಿಯವರಾದ ರಫೀಕ್ಹೊಳಿ ಅವರು ಪಂಜಾಬ್ನ ಜಲಂಧರ್ನಲ್ಲಿ ಭಾನುವಾರ ನಡೆದ 65ನೇ ರಾಷ್ಟ್ರೀಯ ಸೀನಿಯರ್ ಗ್ರಿಕೊ ರೋಮನ್ ಕುಸ್ತಿ ಚಾಂಪಿಯನ್ಷಿಪ್ನ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ವಿಶ್ವ ರ್ಯಾಂಕಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಪಡೆದಿರುವ ಪಂಜಾಬ್ನ ಗುರುಪ್ರೀತ್ ಅವರೊಡನೆ ನಡೆದ ಫೈನಲ್ ಪಂದ್ಯದಲ್ಲಿ 7–3 ಅಂತರದಿಂದ ಮಣಿಯಬೇಕಾಯಿತು.

ವಿಶ್ವ ಕುಸ್ತಿ ಚಾಂಪಿಯನ್ಷಿಪ್ ಹಾಗೂ ಒಲಿಂಪಿಕ್ಗೆ ಭಾರತ ತಂಡವನ್ನು ಆಯ್ಕೆ ಮಾಡುವ ರಾಷ್ಟ್ರೀಯ ತಂಡದ ಶಿಬಿರಕ್ಕೆ ರಫೀಕ್ ಹೊಳಿ ಅರ್ಹತೆ ಪಡೆದಿದ್ದಾರೆ.

ಏಕಲವ್ಯ, ಕರ್ನಾಟಕ ಒಲಿಂಪಿಕ್ ಪ್ರಶಸ್ತಿಗಳನ್ನು ಪಡೆದಿರುವ ರಫೀಕ್ ಹೊಳಿ ಅವರು ಕಾಮನ್ವೆಲ್ತ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅವರಿಗೆ ಪುಣೆಯ ಸೇನಾ ಕ್ಯಾಂಪ್ನಲ್ಲಿ ಅರವಿಂದ್ ದಳವಾಯಿ ತರಬೇತಿ ನೀಡುತ್ತಿದ್ದಾರೆ.

7 ವರ್ಷಗಳಿಂದ ದಾವಣಗೆರೆಯ ಕ್ರೀಡಾ ವಸತಿನಿಯಲದ ವಿದ್ಯಾರ್ಥಿಯಾಗಿರುವ ರಫೀಕ್ ಎರಡು ತಿಂಗಳಿಗೊಮ್ಮೆ ದಾವಣಗೆರೆಗೆ ಬಂದಾಗ ಕುಸ್ತಿ ತರಬೇತುದಾರ ಆರ್.ಶಿವಾನಂದ್ ಅವರ ಬಳಿ ತರಬೇತಿ ಪಡೆದು ಹೋಗುತ್ತಿದ್ದಾರೆ.

ಶನಿವಾರವಷ್ಟೇ ಬಾಗಲಕೋಟೆಯ ಬೇವಿನಹಳ್ಳಿಯ ಅರ್ಜುನ್ ಹಲಕುರ್ಕಿ ಅವರಿಗೆ ಚಿನ್ನದ ಪದಕ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.