ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲ್‌ ರತ್ನಗೆ ಶ್ರೀಜೇಶ್‌ ಹೆಸರು ಶಿಫಾರಸು

ಅರ್ಜುನಕ್ಕೆ ಚಿಂಗ್ಲೆನ್‌ಸನ, ಆಕಾಶ್‌ದೀಪ್‌, ದೀಪಿಕಾ ಹೆಸರು ಸೂಚಿಸಿದ ಹಾಕಿ ಇಂಡಿಯಾ
Last Updated 1 ಮೇ 2019, 17:32 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡದ ಗೋಲ್‌ ಕೀಪರ್‌ ಪಿ.ಆರ್.ಶ್ರೀಜೇಶ್‌ ಅವರಿಗೆ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪ್ರದಾನ ಮಾಡಲು ಹಾಕಿ ಇಂಡಿಯಾ ಶಿಫಾರಸು ಮಾಡಿದೆ.

ಬುಧವಾರ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

2014 ಮತ್ತು 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ, 2014 ಮತ್ತು 2018ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಬೆಳ್ಳಿ ಪದಕ ಗಳಿಸುವಲ್ಲಿ ಶ್ರೀಜೇಶ್‌ ಪಾತ್ರ ವಹಿಸಿದ್ದಾರೆ. 2015ರಲ್ಲಿ ಅರ್ಜುನ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದ್ದು,ಖೇಲ್‌ ರತ್ನ ಪ್ರಶಸ್ತಿಗೆ ಅರ್ಹ ಆಟಗಾರ ಆಗಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳದಶ್ರೀಜೇಶ್‌ ಪ್ರಸ್ತುತ ಹಾಕಿ ತಂಡದ ನಾಯಕರಾಗಿದ್ದಾರೆ. 2006ರಲ್ಲಿ ತಂಡಕ್ಕೆ ಸೇರಿದ ಶ್ರೀಜೇಶ್‌ ಇದುವರೆಗೂ 200 ಅಂತರರಾಷ್ಟ್ರೀಯ ಪಂದ್ಯ ಆಡಿದ್ದು, 2014, 2018ರ ವಿಶ್ವಕಪ್‌ ಮತ್ತು 2012, 2016ರ ಒಲಿಂ‍ಪಿಕ್ಸ್‌ಗಳಲ್ಲಿ ತಂಡಕ್ಕೆ ಕಾಣಿಕೆ ನೀಡಿದ್ದಾರೆ.

ಅರ್ಜುನ ಪುರಸ್ಕಾರಕ್ಕೆ ಚಿಂಗ್ಲೆನ್ಸನಾ ಸಿಂಗ್ ಕಂಗುಂಜಮ್, ಆಕಾಶ್‌ದೀಪ್‌ ಸಿಂಗ್‌ ಮತ್ತು ಮಹಿಳಾ ಹಾಕಿಪಟು ದೀಪಿಕಾ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿಗೆ ಬಲ್ಜೀತ್‌ ಸಿಂಗ್‌, ಬಿ.ಎಸ್‌.ಚೌಹಾಣ್‌, ರೋಮೇಶ್‌ ಪಠಾನಿಯಾ ಹೆಸರನ್ನು ಸೂಚಿಸಿದ್ದರೆ, ಜೀವಮಾನ ಸಾಧನೆಗೆ ನೀಡುವ ಧ್ಯಾನ್‌ಚಂದ್‌ ಪ್ರಶಸ್ತಿಗೆ ಆರ್‌.ಪಿ.ಸಿಂಗ್‌ ಮತ್ತು ಸಂದೀಪ್‌ ಕೌರ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಚಿಂಗ್ಲೆನ್‌ಸನ ಸಿಂಗ್‌ 2011ರಿಂದ 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಪ್ರಸ್ತುತ ಭಾರತ ಹಾಕಿ ತಂಡದ ಉಪನಾಯಕರಾಗಿದ್ದಾರೆ. 24 ವರ್ಷದ‌ ಆಕಾಶ್‌ದೀಪ್‌ ಇದುವರೆಗೂ 170 ಪಂದ್ಯಗಳನ್ನು ಆಡಿದ್ದಾರೆ. ಭಾರತದ ಮಹಿಳಾ ಹಾಕಿ ತಂಡದಲ್ಲಿ ಡಿಫೆಂಡರ್‌ ಆಗಿರುವ ದೀ‍ಪಿಕಾ 2006ರಿಂದ ತಂಡವನ್ನು ಪ್ರತಿನಿಧಿಸುತ್ತಿದ್ದು, 2017ರ ಏಷ್ಯಾಕಪ್‌ನಲ್ಲಿ ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT