ಗುರುವಾರ , ಜೂನ್ 24, 2021
27 °C

ಟಿ.ಟಿ: ಸಂಯುಕ್ತಾ, ರಕ್ಷಿತ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎ.ಸಂಯುಕ್ತಾ ಮತ್ತು ಆರ್‌.ರಕ್ಷಿತ್‌ ಅವರು ಎಂ.ಎಸ್‌.ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ರಕ್ಷಿತ್‌ 6–11, 11–4, 11–2, 11–5, 11–4ರಲ್ಲಿ ಶ್ರೇಯಸ್‌ ಎಸ್‌.ಕುಲಕರ್ಣಿ ಎದುರು ಗೆದ್ದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ರಕ್ಷಿತ್‌ 6–11, 11–6, 8–11, 13–11, 11–6, 11–9ರಲ್ಲಿ ವಿ.ಪಿ.ಚರಣ್‌ ಎದುರೂ, ಶ್ರೇಯಸ್‌ 11–5, 11–2, 11–13, 11–9, 14–12ರಲ್ಲಿ ಸುಶ್ಮಿತ್‌ ವಿರುದ್ಧವೂ ಗೆದ್ದಿದ್ದರು.

ಮಹಿಳಾ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಸಂಯುಕ್ತಾ 9–11, 11–4, 11–9, 11–7, 11–7ರಲ್ಲಿ ಸುಶ್ಮಿತಾ ಆರ್‌.ಬಿದರಿ ಎದುರು ಜಯಿಸಿದರು.

ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಸಂಯುಕ್ತಾ 12–10, 11–9, 12–10, 11–9ರಲ್ಲಿ ದೃಷ್ಟಿ ಮೋರೆ ಎದುರೂ, ಸುಶ್ಮಿತಾ 9–11, 11–3, 9–11, 11–8, 11–9, 11–9ರಲ್ಲಿ ಡಿ.ಕಲ್ಯಾಣಿ ವಿರುದ್ಧವೂ ಗೆದ್ದಿದ್ದರು.

ಯೂತ್‌ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಸಮರ್ಥ್‌ ಕುರ್ಡಿಕೇರಿ 11–5, 11–9, 11–8, 7–11, 5–11, 11–5ರಲ್ಲಿ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಕೌಸ್ತುಭ್‌ 11–8, 8–11, 11–9, 8–11, 13–11, 12–10ರಲ್ಲಿ ಸಮ್ಯಕ್‌ ಕಶ್ಯಪ್‌ ಎದುರೂ, ಸಮರ್ಥ್‌ 15–17, 10–12, 14–12, 12–10, 8–11, 11–4, 11–8ರಲ್ಲಿ ಸುಜನ್‌ ಆರ್‌.ಭಾರದ್ವಾಜ್‌ ಮೇಲೂ ಗೆದ್ದಿದ್ದರು.

ಶ್ರೀಕಾಂತ್‌ ಚಾಂಪಿಯನ್‌: ಸಬ್‌ ಜೂನಿಯರ್‌ ಬಾಲಕರ ಸಿಂಗಲ್ಸ್‌ನಲ್ಲಿ ಪಿ.ವಿ.ಶ್ರೀಕಾಂತ್‌ ಕಶ್ಯಪ್‌ ಚಾಂಪಿಯನ್‌ ಆದರು.

ಫೈನಲ್‌ನಲ್ಲಿ ಶ್ರೀಕಾಂತ್‌ 11–3, 12–10, 11–6ರಲ್ಲಿ ಸಮ್ಯಕ್‌ ಕಶ್ಯಪ್‌ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಸಮ್ಯಕ್‌ 11–6, 11–8, 11–4ರಲ್ಲಿ ಕೆ.ಜೆ.ಆಕಾಶ್‌ ಎದುರೂ, ಶ್ರೀಕಾಂತ್‌ 11–4, 11–6, 11–7ರಲ್ಲಿ ರೋಹಿತ್‌ ಶಂಕರ್‌ ಮೇಲೂ ವಿಜಯಿಯಾಗಿದ್ದರು.

ಸಬ್‌ ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಪಿ.ಎಂ.ಶ್ವೇತಾ ಅವರ ಪಾಲಾಯಿತು.

ಫೈನಲ್‌ನಲ್ಲಿ ಶ್ವೇತಾ 11–3, 11–7, 7–11, 9–11, 11–9ರಲ್ಲಿ ತೃಪ್ತಿ ಪುರೋಹಿತ್‌ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ತೃಪ್ತಿ 11–6, 12–10, 11–3ರಲ್ಲಿ ದೇಸ್ನಾ ಎಂ.ವಂಶಿಕಾ ಎದುರೂ, ಶ್ವೇತಾ 11–13, 7–11, 11–8, 11–4, 11–9ರಲ್ಲಿ ರೈನಾ ನಾರಾ ಮೇಲೂ ಗೆದ್ದಿದ್ದರು.

ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ನಲ್ಲಿ ಭಾಸ್ಕರ್‌ ಮೈಸೂರು ಚಾಂಪಿಯನ್‌ ಆದರು.

ಪ್ರಶಸ್ತಿ ಸುತ್ತಿನಲ್ಲಿ ಭಾಸ್ಕರ್‌ 9–11, 5–11, 11–9, 11–8, 11–9ರಲ್ಲಿ ಶ್ರೀಕರ್‌ ಚೌಧರಿ ಅವರನ್ನು ಸೋಲಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಭಾಸ್ಕರ್‌ 9–11, 11–9, 7–11, 11–5, 11–9ರಲ್ಲಿ ರೈನಾ ನಾರಾ ಎದುರೂ, ಶ್ರೀಕರ್‌ 11–9, 11–3, 5–11, 7–11, 11–6ರಲ್ಲಿ ಜಿ.ಎಸ್‌.ಪ್ರಜ್ವಲ್‌ ಮೇಲೂ ಗೆದ್ದಿದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು