ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ವಿರುದ್ಧದ ಹಾಕಿ ಸರಣಿ: ಗುರ್ಜಿತ್‌ ಕೌರ್‌ ಮಿಂಚು ಭಾರತ ಜಯಭೇರಿ

Last Updated 28 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮಾರ್ಲೊ, ಇಂಗ್ಲೆಂಡ್‌: ಗುರ್ಜಿತ್‌ ಕೌರ್‌, ಕೊನೆ ಗಳಿಗೆಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಭಾರತ ಮಹಿಳಾ ತಂಡ 2–1 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಉತ್ತಮ ಆರಂಭ ಮಾಡಿತು.

ಶನಿವಾರ ನಡೆದ ಈ ಪಂದ್ಯದ ಒಂದು ಹಂತದಲ್ಲಿ 0–1 ಗೋಲಿನಿಂದ ಹಿಂದೆಯಿದ್ದ ಭಾರತ ಚೇತರಿಸಿಕೊಂಡು ಜಯಗಳಿಸಿತು. ಪ್ರವಾಸಿ ತಂಡದ ಪರ ಶರ್ಮಿಲಾ ದೇವಿ ಮತ್ತು ಗುರ್ಜಿತ್‌ ಗೋಲುಗಳನ್ನು ಗಳಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಗೆ ಅಲ್ಲೊಮ್ಮೆ, ಇಲ್ಲೊಮ್ಮೆ ಗೋಲಿನ ಅವಕಾಶಗಳು ದೊರೆತರೂ ಗೋಲುಗಳಾಗಿ ಪರಿವರ್ತನೆ ಆಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಕೆಲವು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೂ, ಇಂಗ್ಲೆಂಡ್‌ ಗೋಲ್‌ಕೀಪರ್‌ ಮ್ಯಾಡಿ ಹಿಂಚ್‌ ತಡೆಗೋಡೆಯಾದರು. ಬ್ರಿಟನ್‌ ನಡೆಸಿದ ಪ್ರತಿದಾಳಿಯೊಂದರಲ್ಲಿ ಭಾರತದ ಗೋಲ್‌ಕೀಪರ್‌ ಸವಿತಾ ಪುನಿಯಾ ಕೂಡ ಗೋಲಿನ ಅವಕಾಶವನ್ನು ಉತ್ತಮವಾಗಿ ತಡೆದರು. ವಿರಾಮದ ಅವಧಿಯವರೆಗಿನ ಆಟ ಗೋಲಿಲ್ಲದೇ ಕಳೆಯಿತು.

ಅಂತಿಮ ಕ್ವಾರ್ಟರ್‌ನ ಆರಂಭದಲ್ಲಿ, ಪಂದ್ಯದ 46ನೇ ನಿಮಿಷ ಆತಿಥೇಯರು ಎಮಿಲಿ ಡೆಫ್ರಾಂಡ್ ಮೂಲಕ ಮುನ್ನಡೆ ಪಡೆಯಿತು.

ಹಿನ್ನಡೆಯಾದರೂ, ಭಾರತ ಎದುರಾಳಿಯ ಮೇಲೆ ಒತ್ತಡ ಹೇರಿದರ ಫಲವಾಗಿ ಶರ್ಮಿಳಾ ಮೂಲಕ ಭಾರತ ಸಮ ಮಾಡಿಕೊಳ್ಳಲು ಸಾಧ್ಯವಾಯಿತು. ಪಂದ್ಯ 1–1 ಡ್ರಾ ಹಾದಿಯಲ್ಲಿರುವಂತೆ ಕಂಡಿತು.

ಆದರೆ 48 ಸೆಕೆಂಡುಗಳು ಉಳಿದುರವಾಗ ಗುರ್ಜಿತ್‌ ಶಾರ್ಟ್‌ ಕಾರ್ನರ್‌ ಒಂದನ್ನು ಗೋಲಾಗಿ ಪರಿವರ್ತಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT