ಭಾನುವಾರ, ಜುಲೈ 3, 2022
24 °C
ಸಬ್‌ ಜೂನಿಯರ್ ವಿಭಾಗದಲ್ಲಿ ರೋಹಿತ್ ಶಂಕರ್‌, ಕೆಡೆಟ್ ವಿಭಾಗದಲ್ಲಿ ತೇಶುಭ್‌ಗೆ ಸೋಲು

ರಾಷ್ಟ್ರೀಯ ಟೇಬಲ್ ಟೆನಿಸ್: ರಾಜ್ಯದ ಆಟಗಾರರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ರೋಹಿತ್ ಶಂಕರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೇಬಲ್ ಟೆನಿಸ್‌ ಟೂರ್ನಿಯ ಸಬ್‌ ಜೂನಿಯರ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ತಮಿಳುನಾಡಿನ ಪ್ರಿಯೇಶ್‌ ಸುರೇಶ್ ಎದುರಿನ ಪಂದ್ಯದಲ್ಲಿ ಅವರು 7-11, 8-11, 5-11, 4-11ರಲ್ಲಿ ಸೋತರು.

ಮೊದಲ ಸುತ್ತಿನಲ್ಲಿ ಬಂಗಾಳದ ಎಮೋನ್ ಅಧಿಕಾರಿ ಅವರನ್ನು 6-11, 11-1, 11-8, 5-11, 11-8ರಲ್ಲಿ ಮಣಿಸಿದ್ದ ರೋಹಿತ್‌ 16ರ ಘಟ್ಟದ ಹಣಾಹಣಿಯಲ್ಲಿ ತಮಿಳುನಾಡಿನ ಉಮೇಶ್‌ ಕುಮಾರ್‌ ವಿರುದ್ಧ 11-6, 3-11, 11-7, 11-9ರಲ್ಲಿ ಜಯ ಸಾಧಿಸಿದ್ದರು.

ಸಬ್‌ ಜೂನಿಯರ್ ವಿಭಾಗದ ಮೊದಲ ಸುತ್ತಿನಲ್ಲಿ ಕರ್ನಾಟಕದ ಆಯುಷ್‌ ತಮಿಳುನಾಡಿನ ಮಣಿಕಂಠನ್‌ ವಿರುದ್ಧ
11-13, 6-11, 11-6, 8-11ರಲ್ಲಿ ಸೋತು ಹೊರಬಿದ್ದರು.

ಕೆಡೆಟ್ ಬಾಲಕರ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಗಳಲ್ಲಿ ಕರ್ನಾಟಕದ ಮೊಹನೀಶ್ ನಂದಿ ಮತ್ತು ತೇಶುಬ್‌ ದಿನೇಶ್‌ ಸೋತರು. ರಾಜಸ್ಥಾನದ ಧಾರಿಯ ರಾವತ್‌ಗೆ ಮೊಹನೀಶ್‌ 2-11, 11-9, 6-11, 13-11, 4-11ರಲ್ಲಿ ಮಣಿದರೆ ಟಿಟಿಎಫ್‌ಐನ ಸೌಣವ್‌ ಬರ್ಮನ್‌ ಎದುರು ತೇಶುಬ್‌ 12-10, 9-11, 7-11, 8-11ರಲ್ಲಿ ಸೋತರು.

ಮೊದಲ ಸುತ್ತಿನಲ್ಲಿ ಮೊಹನೀಶ್‌ ಟಿಟಿಎಫ್‌ಐನ ಸಿದ್ಧಾರ್ಥ್‌ ಪ್ರಕಾಶಂ ವಿರುದ್ಧ 11-5‌, 11-9, 11-9ರಲ್ಲಿ ಜಯ ಗಳಿಸಿದರು. ತೇಶುಭ್‌ 11-7, 11-3, 11-6ರಲ್ಲಿ ತಮಿಳುನಾಡಿನ ಆಕಾಶ್ ರಾಜವೇಲು ಅವರನ್ನು ಮಣಿಸಿದರು. ಅರ್ಣವ್‌ ನವೀನ್ ಬಂಗಾಳದ ರೂಪಂ ಸರ್ದಾರ್‌ಗೆ 3-11, 11–6, 11-9, 8-11, 7-11ರಲ್ಲಿ ಮಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು