ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿ ಅಮೆಚೂರ್ ಗಾಲ್ಫ್‌ 21ರಿಂದ

Last Updated 12 ಸೆಪ್ಟೆಂಬರ್ 2021, 4:49 IST
ಅಕ್ಷರ ಗಾತ್ರ

ಬೆಂಗಳೂರು: ರೋಟರಿ ಅಮೆಚೂರ್ ದಕ್ಷಿಣ ಭಾರತ ಗಾಲ್ಫ್ ಚಾಂಪಿಯನ್‌ಷಿಪ್‌ ಇದೇ 21ರಿಂದ ಬಿಡದಿಯ ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯಲಿದೆ. ದೇಶದ ಪ್ರಮುಖ ಪುರುಷರ ಮತ್ತು ಮಹಿಳಾ ಗಾಲ್ಫರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಆತಂಕದಿಂದಾಗಿ ಕಳೆದ ವರ್ಷ ಚಾಂಪಿಯನ್‌ಷಿಪ್ ನಡೆದಿರಲಿಲ್ಲ.

21ರಿಂದ ನಾಲ್ಕು ದಿನ ಪುರುಷರ ಸ್ಪರ್ಧೆಗಳು ನಡೆಯಲಿದ್ದು 22ರಿಂದ ಮಹಿಳೆಯರ ಸ್ಪರ್ಧೆಗಳು ಇರುತ್ತವೆ. ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್ ಕರ್ನಾಟಕದ ಆರ್ಯನ್ ರೂಪಾ ಆನಂದ್, ಮಹಾರಾಷ್ಟ್ರದ ರೋಹನ್ ಪಾಟೀಲ್‌, ರಾಜಸ್ತಾನದ ಪ್ರಖರ್‌, ಪಶ್ಚಿಮ ಬಂಗಾಳದ ಸ್ನೇಹಾ ಸಿಂಗ್‌ ಮುಂತಾದವರು ಕಣದಲ್ಲಿರುವ ಪ್ರಮುಖರು.

ಸ್ಥಳೀಯ ಗಾಲ್ಫರ್‌ಗಳಾದ ಅವನಿ ಪ್ರಶಾಂತ್‌, ರಿಷಿಕಾ ಮುರಳೀಧರ್‌, ಜಿ.ಎನ್‌.ಬಸವರಾಜು, ಗಗನ್ ವಿನೋದ್‌ ಮತ್ತು ಮೈಸೂರಿನ ವಿಧಾತ್ರಿ ಅರಸ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT