ಮಂಗಳವಾರ, ಫೆಬ್ರವರಿ 25, 2020
19 °C

ಉದ್ದೀಪನ ಮದ್ದು ಸೇವನೆ: ರಷ್ಯಾ ಮೇಲೆ ನಿಷೇಧ ಸಾಧ್ಯತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಮಾಸ್ಕೊ: ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ರಷ್ಯಾ ಈಗ ನಾಲ್ಕು ವರ್ಷಗಳ ಒಲಿಂಪಿಕ್‌ ನಿಷೇಧಕ್ಕೆ ಒಳಗಾಗುವ ಭೀತಿ ಎದುರಿಸುತ್ತಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ಸೋಮವಾರ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದೆ.‌

‘ಈ ಶಿಕ್ಷೆ ನ್ಯಾಯಸಮ್ಮತವಲ್ಲದ ಮತ್ತು ದೇಶದ ಕ್ರೀಡಾಕ್ಷೇತ್ರವನ್ನು ನಾಶಪಡಿಸುವ ಪಾಶ್ಚಾತ್ಯರ ಪ್ರಯತ್ನದ ಭಾಗವಾಗಿದೆ’ ಎಂದು ಸ್ಥಳೀಯ ಅಧಿಕಾರಿಗಳು ದೂರಿದ್ದಾರೆ.

ರಷ್ಯಾ ಅಥ್ಲೆಟಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿದೆ ಎನ್ನುವುದಕ್ಕೆ 2015ರಲ್ಲಿ ವಾಡಾ ಸಿದ್ಧಪಡಿಸಿದ ವರದಿಯಲ್ಲಿ ಸಾಕ್ಷ್ಯ ದೊರಕಿತ್ತು. ಕ್ರೀಡಾ ಕ್ಷೇತ್ರದ ಪ್ರಬಲ ಶಕ್ತಿಯಾಗುವ ಯತ್ನದಲ್ಲಿದ್ದ ರಷ್ಯಾ ಈ ವರದಿಯ ನಂತರ ಡೋಪಿಂಗ್‌ ಹಗರಣದ ಹಬೆಯಲ್ಲಿ
ಬೇಯುತ್ತಿದೆ. 

ಹಿಂದಿನ ಎರಡು ಒಲಿಂಪಿಕ್ಸ್‌ಗಳಿಗೆ ರಷ್ಯಾ ತನ್ನ ಪ್ರಮುಖ ಅಥ್ಲೀಟುಗಳಿಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಪ್ಯಾಂಗ್‌ಚಾಂಗ್‌ ಚಳಿಗಾಲದ ಕ್ರೀಡೆಗಳಲ್ಲಿ ರಷ್ಯಾ ಸ್ವಂತ ಧ್ವಜದಡಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. 2014ರ ಸೋಚಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಹಗರಣಗಳನ್ನು ಸರ್ಕಾರವೇ ಮುಚ್ಚಿಟ್ಟಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು.

ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿದ ದೂರುಗಳನ್ನೂ ರಷ್ಯಾ ಎದುರಿಸುತ್ತಿದೆ.

‘ವಾಡಾ’ದ ಕಾರ್ಯಕಾರಿ ಸಮಿತಿ ಸೋಮವಾರ ಲಾಸೇನ್‌ನಲ್ಲಿ (ಸ್ವಿಜರ್ಲೆಂಡ್‌) ಸೇರಲಿದ್ದು, ಅಂದು ರಷ್ಯಾದ ಒಲಿಂಪಿಕ್‌ ಭವಿಷ್ಯ ತೀರ್ಮಾನವಾಗಲಿದೆ.

ನಿಷೇಧ ಹೇರಿದರೆ ರಷ್ಯಾ ಯಾವುದೇ ಪ್ರಮುಖ ಕ್ರೀಡಾಕೂಟಗಳ ಆತಿಥ್ಯ ವಹಿಸುವಂತಿಲ್ಲ. ಸಚ್ಚಾರಿತ್ರ್ಯದ ಅಥ್ಲೀಟುಗಳು ಪಾಲ್ಗೊಳ್ಳಬಹುದಾದರೂ ರಾಷ್ಟ್ರೀಯ ಧ್ವಜದಡಿ ಭಾಗವಹಿಸುವಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು