ಸೋಮವಾರ, ಸೆಪ್ಟೆಂಬರ್ 27, 2021
21 °C

Tokyo Olympics | ಚೊಚ್ಚಲ ಪಂದ್ಯದಲ್ಲೇ ಸೋಲಿಗೆ ಶರಣಾದ ಸಾಯಿ ಪ್ರಣೀತ್

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಬ್ಯಾಡ್ಮಿಂಟನ್ ಪಟು ಸಾಯಿ ಪ್ರಣೀತ್, ಚೊಚ್ಚಲ ಪಂದ್ಯದಲ್ಲೇ ಸೋಲಿಗೆ ಶರಣಾಗಿದ್ದಾರೆ.

'ಡಿ' ಗುಂಪಿನ ಪಂದ್ಯದಲ್ಲಿ ತಮಗಿಂತಲೂ ಕೆಳಗಿನ ರ‍್ಯಾಂಕ್‌ನ ಇಸ್ರೇಲ್‌ನ ಮಿಶಾ ಝಿಲ್ಬರ್‌ಮನ್ ವಿರುದ್ಧ 17-21 15-21ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ: 

 

 

 

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ 15ನೇ ರ‍್ಯಾಂಕ್‌ನ ಪ್ರಣೀತ್ 41 ನಿಮಿಷಗಳ ಹೋರಾಟದಲ್ಲಿ 47ನೇ ರ‍್ಯಾಂಕ್‌ನ ಮಿಶಾ ವಿರುದ್ಧ ಪರಾಭವಗೊಂಡರು.

 

13ನೇ ಶ್ರೇಯಾಂಕಿತ ಪ್ರಣೀತ್ ಮುಂದಿನ ಪಂದ್ಯದಲ್ಲಿ 29ನೇ ರ‍್ಯಾಂಕ್‌ನ ಹಾಲೆಂಡ್‌ನ ಮಾರ್ಕ್ ಕಾಲ್ಜೌವ್ ಸವಾಲನ್ನು ಎದುರಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು