ಮಂಗಳವಾರ, ಸೆಪ್ಟೆಂಬರ್ 21, 2021
21 °C

ಸೇಲಿಂಗ್‌: ಹಿನ್ನಡೆ ಕಂಡ ವಿಷ್ಣು, ನೇತ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಎನೊಶಿಮಾ: ಸೇಲಿಂಗ್‌ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತದ ವಿಷ್ಣು ಸರವಣನ್‌ ಹಾಗೂ ನೇತ್ರಾ ಕುಮನನ್‌ ಅವರಿಂದ ಮಂಗಳವಾರ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲ.

ಪುರುಷರ ಲೇಸರ್‌ ಸ್ಪರ್ಧೆಯಲ್ಲಿ ಸರವಣನ್‌ ಅವರು ಐದು ಮತ್ತು ಆರನೇ ರೇಸ್‌ಗಳಲ್ಲಿ ಕ್ರಮವಾಗಿ 23 ಮತ್ತು 22ನೇ ಸ್ಥಾನ ಗಳಿಸಿದರು. 

ಮಹಿಳೆಯರ ಲೇಸರ್‌ ರೇಡಿಯಲ್‌ ಸ್ಪರ್ಧೆಯಲ್ಲಿ 32ನೇಯವರಾಗಿ ಐದನೇ ರೇಸ್‌ ಮುಗಿಸಿದ ನೇತ್ರಾ, ನಂತರದ ರೇಸ್‌ನಲ್ಲಿ 38ನೇ ಸ್ಥಾನ ಪಡೆದರು. 

ಇನ್ನೂ ನಾಲ್ಕು ರೇಸ್‌ಗಳು ಬಾಕಿ ಇದ್ದು, ಭಾರತದ ಸ್ಪರ್ಧಿಗಳ ಪದಕದ ಕನಸು ಸಾಕಾರಗೊಳ್ಳಬೇಕಾದರೆ ಅಧಿಕ ಪಾಯಿಂಟ್ಸ್‌ ಗಳಿಸಬೇಕಿದೆ. ಆದರೆ ಈ ಹಾದಿ ಅಷ್ಟು ಸುಲಭದ್ದಲ್ಲ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು