ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್‌ ಶೂಟಿಂಗ್‌: ಸಮೀರ್‌ಗೆ ಬೆಳ್ಳಿ

Published : 17 ಅಕ್ಟೋಬರ್ 2022, 16:12 IST
ಫಾಲೋ ಮಾಡಿ
Comments

ಕೈರೊ: ಭಾರತದ ಸಮೀರ್‌ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ಪುರುಷರ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.

ಪದಕ ಸುತ್ತಿನ ಹಣಾಹಣಿಯಲ್ಲಿ ಸಮೀರ್‌ 23 ಪಾಯಿಂಟ್ಸ್‌ ಕಲೆಹಾಕಿದರು. 25 ಪಾಯಿಂಟ್ಸ್‌ ಸಂಗ್ರಹಿಸಿದ ಚೀನಾದ ಲಿಯು ಯಾಂಗ್‌ಪನ್‌ ಚಿನ್ನ ಪಡೆದರು. ಸಮೀರ್‌ ಅವರು ಅರ್ಹತಾ ಸುತ್ತಿನಲ್ಲಿ 573 ಸ್ಕೋರ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಫೈನಲ್‌ ತಲುಪಿದ್ದರು.

ಕಣದಲ್ಲಿದ್ದ ಭಾರತದ ಇತರ ಶೂಟರ್‌ಗಳಾದ ಉದಯ್‌ವೀರ್‌ ಸಿಂಗ್, ಜತಿನ್‌, ಆದರ್ಶ್‌ ಸಿಂಗ್‌ ಮತ್ತು ಹರ್ಷವರ್ಧನ ಯಾದವ್‌ ಅವರು ಅರ್ಹತಾ ಹಂತದಲ್ಲೇ ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT