ಮಂಗಳವಾರ, ಜನವರಿ 18, 2022
22 °C

ಬ್ಯಾಡ್ಮಿಂಟನ್‌: ವಿಶ್ವ ಟೂರ್ ಫೈನಲ್ಸ್‌ಗೆ ಸಾತ್ವಿಕ್–ಚಿರಾಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಿ, ಇಂಡೊನೇಷ್ಯಾ: ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ಶೆಟ್ಟಿ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದಲ್ಲಿ ವಿಶ್ವ ಟೂರ್‌ ಫೈನಲ್ಸ್‌ಗೆ ಅರ್ಹತೆ ಗಳಿಸುವ ಮೂಲಕ ಈ ಶ್ರೇಯ ಗಳಿಸಿದ ದೇಶದ ಮೊದಲ ಜೋಡಿ ಎನಿಸಿಕೊಂಡಿದೆ. ಬುಧವಾರ ಇಲ್ಲಿ ಟೂರ್ನಿ ಆರಂಭವಾಗಲಿದೆ.

ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಭಾರತದ ಜೋಡಿಯು, ಹೋದ ವಾರ ಕೊನೆಗೊಂಡ ಇಂಡೊನೇಷ್ಯಾ ಓಪನ್‌ ಸೂಪರ್ 1000 ಟೂರ್ನಿಯ ಸೆಮಿಫೈನಲ್‌ ತಲುಪಿದ್ದರು. ಇದೇ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಜಪಾನ್‌ನ ಅಕಿರಾ ಕೋಗಾ ಮತ್ತು ತೈಚಿ ಸೈಟೊ ಕೂಡ ನಾಲ್ಕರ ಘಟ್ಟದ ಪಂದ್ಯದಲ್ಲಿ ಸೋಲು ಅನುಭವಿಸಿದ್ದರಿಂದ ಭಾರತದ ಜೋಡಿಗೆ ವರ್ಷಾಂತ್ಯದ ಬಿಡಬ್ಲ್ಯುಎಫ್‌ ಟೂರ್‌ ಫೈನಲ್ಸ್‌ಗೆ ಪ್ರವೇಶ ಸಿಕ್ಕಿದೆ.

ಸಾತ್ವಿಕ್ ಮತ್ತು ಚಿರಾಗ್ ಸೆಮಿಫೈನಲ್‌ನಲ್ಲಿ ವಿಶ್ವ ಅಗ್ರಕ್ರಮಾಂಕದ ಜೋಡಿಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ಅವರನ್ನು ಸೋಲಿಸಬೇಕಾಗಿತ್ತು. ಆದರೆ ಅವರ ಎದುರು ಭಾರತದ ಆಟಗಾರರು 16-21 18-21 ರಲ್ಲಿ ನಿರಾಸೆ ಅನುಭವಿಸಿದ್ದರು.

ಓದಿ: 

ಅಕಿರಾ ಮತ್ತು ತೈಚಿ ಅವರು ಸ್ವದೇಶದ ಜೋಡಿಯಾದ ಟಕುರೊ ಹೊಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ 20–22 14–21 ಅಂತರದಲ್ಲಿ ಸೋತಿದ್ದರಿಂದ ಭಾರತದ ಜೋಡಿಗೆ ಹಾದಿ ಸುಗಮವಾಯಿತು.

ಬಿಡಬ್ಲ್ಯುಎಫ್‌ ಟೂರ್‌ ಫೈನಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಪಿ.ವಿ.ಸಿಂಧು, ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ ಜೋಡಿ ಕೂಡ ಆಡಲಿದೆ.

ಸಿಂಧು, ಬಿಡಬ್ಲ್ಯುಎಫ್‌ ಟೂರ್‌ ಫೈನಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ (2018) ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. 2011ರಲ್ಲಿ ಸೈನಾ ನೆಹ್ವಾಲ್‌ ಅವರು ಸೂಪರ್‌ ಸಿರೀಸ್‌ ಫೈನಲ್ಸ್‌ನಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು