ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Commonwealth Games: ಫೈನಲ್‌ಗೆ ಸಿಂಧು, ಸೇನ್‌; ಚಿನ್ನಕ್ಕೆ ಇನ್ನೊಂದೇ ಹೆಜ್ಜೆ

Last Updated 7 ಆಗಸ್ಟ್ 2022, 14:02 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತವು ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧು21-19, 21-17ರಿಂದ ಸಿಂಗಪುರದ ಯೊ ಜಿಯಾ ಮಿನ್ ಅವರನ್ನು ಪರಾಭವಗೊಳಿಸಿದರು. 49 ನಿಮಿಷಗಳ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ತಾಂತ್ರಿಕವಾಗಿ ಶ್ರೇಷ್ಠ ಆಟವಾಡಿದರು.

ಮಾಜಿ ವಿಶ್ವಚಾಂಪಿಯನ್ ಕೂಡ ಆಗಿರುವ ಸಿಂಧು, ಕಳೆದ ಎರಡು ಆವೃತ್ತಿಗಳಲ್ಲಿ ಒಂದು ಕಂಚು ಮತ್ತು ಬೆಳ್ಳಿ ಗೆದ್ದುಕೊಂಡಿದ್ದರು. ಶನಿವಾರ ನಡೆದಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಗೊಹ್‌ ವೇ ಜಿನ್ ಅವರನ್ನು 19-21, 21-14, 21-18ರಿಂದ ಮಣಿಸಿದ್ದರು.

ಮತ್ತೊಂದೆಡೆ,ಪುರುಷರ ಸಿಂಗಲ್ಸ್ ವಿಭಾಗದಲ್ಲಿಲಕ್ಷ್ಯ ಸೇನ್‌ ಅವರುಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿರುವ ಲಕ್ಷ್ಯ, ಸೆಮಿಫೈನಲ್ ಪಂದ್ಯದಲ್ಲಿ21-10, 18-21, 21-16ರಿಂದ ಸಿಂಗಪುರದ ಜಿಯಾ ಹೆಂಗ್ ಟೆಹ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಅಮೋಘ ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಲಕ್ಷ್ಯ ಗಮನಸೆಳೆದರು.

ಈ ಮಧ್ಯೆ, ಹಾಕಿ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್‌ ತಂಡವನ್ನು ಮಣಿಸುವ ಮೂಲಕ ಭಾರತದ ವನಿತೆಯರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರೆ, ಮಹಿಳೆಯರ 48 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ನೀತೂ ಘಂಘಸ್ ಹಾಗೂ ಪುರುಷರ 51 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಘಲ್ ಅವರು ಚಿನ್ನದ ಪದಕ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT