ಟೋಕಿಯೊ: ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ನಿರೀಕ್ಷೆಯಾಗಿದ್ದ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಸೋಲಿಗೆ ಶರಣಾಗುವುದರೊಂದಿಗೆ ಪದಕದ ಕನಸು ಭಗ್ನಗೊಂಡಿದೆ.
ಶನಿವಾರ ನಡೆದ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಭಾರತದ ಜೋಡಿ, ಮೂರನೇ ಶ್ರೇಯಾಂಕಿತರಾದ ಚೈನೀಸ್ ತೈಪೆಯ ಲಿನ್ ಯೂನ್-ಜು ಹಾಗೂ ಚೆಂಗ್ ಐ-ಚಿಂಗ್ ಜೋಡಿ ವಿರುದ್ಧ ಪರಾಭವಗೊಂಡರು.
ಮೊದಲೆರಡು ಗೇಮ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರೂ ಅದರ ಸ್ಪಷ್ಟ ಲಾಭ ಪಡೆಯಲು ಭಾರತದ ಜೋಡಿಗೆ ಸಾಧ್ಯವಾಗಲಿಲ್ಲ. ಪರಿಣಾಮ 11-8, 11-6, 11-5, 11-4ರ ಅಂತರದಲ್ಲಿ ಸೋಲಿಗೆ ಶರಣಾದರು.
12ನೇ ಶ್ರೇಯಾಂಕಿತ ಮಣಿಕಾ-ಶರತ್ ಜೋಡಿ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯನ್ನು ಗೆದ್ದು ಟೋಕಿಯೊ ಟಿಕೆಟ್ ಪಡೆದಿದ್ದರು.
ಮಣಿಕಾ ಬಾತ್ರಾ ಹಾಗೂ ಸುತೀರ್ಥಾ ಮುಖರ್ಜಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.