ಶುಕ್ರವಾರ, ಸೆಪ್ಟೆಂಬರ್ 17, 2021
22 °C

Tokyo Olympics | ಹಾಕಿ: ನ್ಯೂಜಿಲೆಂಡ್ ಮಣಿಸಿದ ಭಾರತ ಶುಭಾರಂಭ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿರುವ ಭಾರತ ತಂಡವು ಶುಭಾರಂಭ ಮಾಡಿದೆ.

'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮನ್‌ಪ್ರೀತ್‌ಸಿಂಗ್ ಬಳಗವು ಅಮೋಘ ನಿರ್ವಹಣೆ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಿದೆ.

ಇದನ್ನೂ ಓದಿ: 

ಭಾರತದ ಪರ ಎರಡು ಗೋಲು (26 ಹಾಗೂ 33ನೇ ನಿಮಿಷ) ಬಾರಿಸಿದ ಹರ್ಮನ್‌ಪ್ರೀತ್ ಗೆಲುವಿನ ರೂವಾರಿ ಎನಿಸಿದರು. ಮಗದೊಂದು ಗೋಲು ರೂಪಿಂದರ್ ಪಾಲ್ (10ನೇ ನಿಮಿಷ) ಪಾಲಾಯಿತು.

 

 

 

ನ್ಯೂಜಿಲೆಂಡ್ ಪರ ರಸೆಲ್ ಕೆ (21ನೇ ನಿಮಿಷ) ಹಾಗೂ ಜೆನೆಸ್ ಎಸ್ (27ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

 

ಭಾನುವಾರ ನಡೆಯಲಿರುವ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ.

ಹಾಕಿಯಲ್ಲಿ 1980ರ ಬಳಿಕ ಪದಕ ಜಯಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ತಂಡದಿಂದ ಪದಕದ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು