ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್‌ ಶೂಟಿಂಗ್ ಚಾಂಪಿಯನ್‌ಷಿಪ್: ಚಿನ್ನಕ್ಕೆ ಗುರಿಯಿಟ್ಟ ಮನು ಭಾಕರ್‌

Last Updated 1 ಅಕ್ಟೋಬರ್ 2021, 14:02 IST
ಅಕ್ಷರ ಗಾತ್ರ

ಲಿಮಾ, ಪೆರು: ವಿಶ್ವ ಜೂನಿಯರ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ‌ಗುರುವಾರ ಒಂದೇ ದಿನ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಬೀಗಿದ್ದಾರೆ.

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ, ಒಲಿಂಪಿಯನ್‌ ಮನು ಭಾಕರ್ ಚಿನ್ನದ ಹೊಳಪು ಮೂಡಿಸಿದರು. ಫೈನಲ್‌ನಲ್ಲಿ ಅವರು ಒಟ್ಟು 241.3 ಪಾಯಿಂಟ್ಸ್ ಕಲೆಹಾಕಿದರೆ, ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಇಶಾ ಸಿಂಗ್‌ (240 ಪಾಯಿಂಟ್ಸ್) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಟರ್ಕಿಯ ಯೆಸ್‌ಮಿನ್ ಬೇಜಾ ಯಿಲ್ಮಾಜ್‌ ಕಂಚು ಗೆದ್ದರು.

ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ರುದ್ರಾಕ್ಷ್‌ ಬಾಳಾಸಾಹೇಬ್ ಪಾಟೀಲ್‌ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವುದರೊಂದಿಗೆ ಭಾರತದ ಪದಕದ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ರಮಿತಾ ಕಂಚಿನ ಪದಕ ಗಳಿಸಿದರು.

ಉದಯೋನ್ಮುಖ ಶೂಟರ್‌ ಗನೇಮತ್ ಶೆಕೋನ್‌, ಮಹಿಳೆಯರ ಸ್ಕೀಟ್ ವಿಭಾಗದಲ್ಲಿ ಬೆಳ್ಳಿ ಬೆಳಗು ಮೂಡಿಸಿದರು. ಈ ವಿಭಾಗದ ಚಿನ್ನವು ಅಮೆರಿಕದ ಅಲಿಶಾ ಫಯತ್‌ ಲೇಯ್ನ್ ಅವರ ಪಾಲಾಯಿತು. ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ರೈಜಾ ಧಿಲ್ಲೋನ್ ಆರನೇ ಸ್ಥಾನ ಗಳಿಸಿದರು.

10 ಮೀ. ಏರ್ ಪಿಸ್ತೂಲ್‌ನಲ್ಲಿ ನವೀನ್ ನಾಲ್ಕನೇ ಸ್ಥಾನ ಗಳಿಸಿದರೆ, ಸರಬ್‌ಜೋತ್ ಸಿಂಗ್‌ ಆರು ಹಾಗೂ ವಿಜಯವೀರ್ ಸಿಂಗ್‌ ಎಂಟನೇ ಸ್ಥಾನಕ್ಕೆ ಸಮಾಧಾನಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT