ಐವಾಸ್‌ ಪ್ಯಾರಾ ಶೂಟಿಂಗ್‌ಗೆ ಶ್ರೀಹರ್ಷ

7

ಐವಾಸ್‌ ಪ್ಯಾರಾ ಶೂಟಿಂಗ್‌ಗೆ ಶ್ರೀಹರ್ಷ

Published:
Updated:
Prajavani

ಹುಬ್ಬಳ್ಳಿ: ಶಾರ್ಜಾದಲ್ಲಿ ಇದೇ 9ರಿಂದ ನಡೆಯಲಿರುವ ಐವಾಸ್‌ ಪ್ಯಾರಾ ಶೂಟಿಂಗ್‌ ಲೆವಲ್‌–3 ವಿಶ್ವ ಕೂಟಕ್ಕೆ ಹುಬ್ಬಳ್ಳಿಯ ಪ್ಯಾರಾ ಶೂಟರ್‌ ಶ್ರೀಹರ್ಷ ದೇವರೆಡ್ಡಿ ಅರ್ಹತೆ ಪಡೆದಿದ್ದಾರೆ. ತಿರುವನಂತಪುರದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಹರ್ಷ 10 ಮೀಟರ್‌ ಏರ್ ರೈಫಲ್‌ ಸ್ಪರ್ಧೆಯ ಸ್ಟ್ಯಾಂಡಿಂಗ್‌ ಮತ್ತು ಪ್ರೋನ್‌ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಐವಾಸ್‌ನಲ್ಲಿ ಅವರು ಇದೇ ವಿಭಾಗದಲ್ಲಿ ಪೈಪೋಟಿ ನಡೆಸಲಿದ್ದಾರೆ.

ಪ್ಯಾರಾ ಶೂಟಿಂಗ್ ಸ್ಪರ್ಧೆಯಲ್ಲಿ ಶ್ರೀಹರ್ಷ ಮತ್ತು ಮಹಾರಾಷ್ಟ್ರದ ಸ್ವರೂಪ್‌ ಉನಾಲಕರ್‌ ದೇಶ ಪ್ರತಿನಿಧಿಸಲಿದ್ದಾರೆ. ಮಾಜಿ ಯೋಧ ಹಾಗೂ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯ ಕೋಚ್‌ ರವಿಚಂದ್ರ ಬಾಲೆಹೊಸೂರ ಭಾರತ ತಂಡಕ್ಕೆ ತರಬೇತುದಾರರಾಗಿ ಶಾರ್ಜಾಗೆ ತೆರಳಲಿದ್ದಾರೆ.

‘10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಒಟ್ಟು 654 ಅಂಕಗಳು ಇರುತ್ತವೆ. ಸ್ಟ್ಯಾಂಡಿಂಗ್‌ ವಿಭಾಗದಲ್ಲಿ 628 ಹಾಗೂ ಪ್ರೊನ್‌ ವಿಭಾಗದಲ್ಲಿ 633 ಅಂಕಗಳನ್ನು ಗಳಿಸಿದರೆ ವಿಶ್ವಕಪ್‌ಗೆ ಅರ್ಹತೆ ಲಭಿಸುತ್ತದೆ. ಭಾರತ ಲೆವಲ್‌–1 ತಂಡದಲ್ಲಿ ಆಡಲು ಅವಕಾಶ ಸಿಗುತ್ತದೆ. ಆದ್ದರಿಂದ ಐವಾಸ್‌ ಕ್ರೀಡಾಕೂಟದ ಮಹತ್ವದ ಹೆಚ್ಚಿದೆ’ ಎಂದು ಶ್ರೀಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !