ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು– ಕರೋಲಿನಾ ಮುಖಾಮುಖಿ

Last Updated 9 ಜನವರಿ 2023, 14:12 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಐದು ತಿಂಗಳ ಬಳಿಕ ಸ್ಪರ್ಧಾಕಣಕ್ಕೆ ಮರಳಲಿರುವ ಭಾರತದ ಪಿ.ವಿ. ಸಿಂಧು ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.

ಮಂಗಳವಾರದಿಂದ ಟೂರ್ನಿಯು ಇಲ್ಲಿ ನಡೆಯಲಿದ್ದು ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸಿಂಧು ಅವರಿಗೆ ಸ್ಪೇನ್‌ನ ಕರೋಲಿನಾ ಮರಿನ್‌ ಮುಖಾಮುಖಿಯಾಗಲಿದ್ದಾರೆ. ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌ ಸೇರಿದಂತೆ ಭಾರತದ ಆಟಗಾರರು ವರ್ಷದ ಮೊದಲ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ಪಾದದ ಗಾಯದಿಂದ ಬಳಲಿದ್ದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಚೇತರಿಸಿಕೊಂಡಿದ್ದು, ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಅವರು ಕೊನೆಯ ಬಾರಿ ಆಡಿದ್ದು 2022ರ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ. ಮರಿನ್ ಅವರು ಸಿಂಧು ಎದುರು ಕೊನೆಯ ಬಾರಿ ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಅಲ್ಲದೆ ಮುಖಾಮುಖಿಯಾದ ಒಟ್ಟು ಪಂದ್ಯಗಳ ಗೆಲುವಿನಲ್ಲಿ 9–5ರಿಂದ ಮುಂದಿದ್ದಾರೆ. ಹೀಗಾಗಿ ಇಬ್ಬರ ಮಧ್ಯದ ಹಣಾಹಣಿ ಕುತೂಹಲ ಕೆರಳಿಸಿದೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಅವರು ಸಹ ಆಟಗಾರ ಪ್ರಣಯ್ ಎದುರೇ ಆಡಲಿದ್ದಾರೆ. ಕಿದಂಬಿ ಶ್ರೀಕಾಂತ್ ಅವರು ಜಪಾನ್‌ನ ಕೆಂಟೊ ನಿಶಿಮೊಟಾ ವಿರುದ್ಧ ಕಣಕ್ಕಿಳಿಯುವರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ, ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಆಕರ್ಷಿ ಕಶ್ಯಪ್‌ ಮತ್ತು ಮಾಳವಿಕಾ ಬನ್ಸೋದ್‌ ಅವರು ಅದೃಷ್ಟಪರೀಕ್ಷಿಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌, ಅಶ್ವಿನ ಭಟ್‌– ಶಿಖಾ ಗೌತಮ್‌, ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್– ತನಿಶಾ ಕ್ರಾಸ್ತೊ ಆಡುವರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌, ಮಲೇಷ್ಯಾದ ಲೀ ಜಿ ಜಿಯಾ, ಜಪಾನ್‌ನ ಅಕಾನೆ ಯಮಗುಚಿ ಮತ್ತು ತೈವಾನ್‌ನ ತೈ ಜು ಯಿಂಗ್‌ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT