ಮಂಗಳವಾರ, ಜುಲೈ 5, 2022
21 °C
ಅಶ್ವಿನಿ–ಸಿಕ್ಕಿ ಜೋಡಿ ಎರಡನೇ ಸುತ್ತು ಪ್ರವೇಶ

ಸ್ಷಿಸ್ ಓಪನ್ ಬ್ಯಾಡ್ಮಿಂಟನ್: ಶುಭಾರಂಭ ಮಾಡಿದ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಸೆಲ್‌: ಭಾರತದ ಪಿ.ವಿ ಸಿಂಧು ಅವರು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಲೆನೆ ಹೊಜ್ಮಾರ್ಕ್ ಎದುರು 21-14, 21-12ರಲ್ಲಿ ಜಯ ಗಳಿಸಿದರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಸ್ಥಳೀಯ ಜೋಡಿ ಅಲೀನ್ ಮುಲ್ಲರ್ ಮತ್ತು ಜೆಂಜಿರಾ ಸ್ಟೇಡಲ್‌ಮ್ಯಾನ್ ಎದುರು 21-15, 21-16ರಲ್ಲಿ ಗೆದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಎಂ.ಆರ್.ಅರ್ಜುನ್ ಮತ್ತು ಧ್ರುವ ಕಪಿಲ 19-21 13-21ರಲ್ಲಿ ಇಂಡೊನೇಷ್ಯಾದ ಫಜರ್ ಅಲ್ಫಿಯನ್ ಮತ್ತು ಮುಹಮ್ಮದ್ ರಿಯಾನ್‌ಗೆ ಮಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು