ಭಾನುವಾರ, ಫೆಬ್ರವರಿ 23, 2020
19 °C

ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್‌: ಕೊನೆಗೂ ಗೆದ್ದ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಂಗ್‌ಝೌ: ಎರಡು ಸೋಲುಗಳ ನಂತರ ಭಾರತದ ಪಿ.ವಿ.ಸಿಂಧು, ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್‌ನ ‘ಎ’ ಗುಂಪಿನ ಮೂರನೇ ಪಂದ್ಯ ದಲ್ಲಿ ಶುಕ್ರವಾರ ಚೀನಾದ ಹೆ ಬಿಂಗ್‌ ಜಿಯಾವೊ ಅವರನ್ನು ಸೋಲಿಸಿದರು.

ಮೊದಲ ಎರಡು ದಿನ ಅನುಭವಿಸಿದ ಸೋಲುಗಳ ನಂತರ ಸಿಂಧು ಅವರಿಗೆ ಪ್ರಶಸ್ತಿ ಅವಕಾಶ ಕ್ಷೀಣವಾಗಿತ್ತು.

ಮೊದಲ ಗೇಮ್‌ನಲ್ಲಿ 9–18ರ ಹಿನ್ನಡೆಯಿಂದ ಅಮೋಘ ರೀತಿ ಚೇತರಿಸಿಕೊಂಡ ಸಿಂಧು 21–19, 21–19 ರಿಂದ ಚೀನಾ ಆಟಗಾರ್ತಿ ವಿರುದ್ಧ ಜಯಗಳಿಸಿದರು.

ಇಲ್ಲಿ ಗೆಲ್ಲುವ ಮೂಲಕ ಸಿಂಧು, ಇದೇ ಎದುರಾಳಿ ವಿರುದ್ಧ ಸತತ ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಅಂತ್ಯಗೊಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು