ಭಾನುವಾರ, ಆಗಸ್ಟ್ 25, 2019
21 °C

ಸೌರವ್‌ ಭಾರತದ ನಂ.1 ಆಟಗಾರ

Published:
Updated:
Prajavani

ನವದೆಹಲಿ (ಪಿಟಿಐ): ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಸೌರವ್‌ ಕೊಠಾರಿ ಅವರು ಭಾರತದ ನಂಬರ್‌ ಒನ್‌ ಬಿಲಿಯರ್ಡ್ಸ್‌ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ರಾಷ್ಟ್ರೀಯ ಆಯ್ಕೆ (ಸೆಲೆಕ್ಸನ್‌) ಚಾಂಪಿಯನ್‌ಷಿಪ್‌ನ ಎರಡು ಮಾದರಿಗಳಲ್ಲಿ ಪ್ರಶಸ್ತಿ ಗೆದ್ದು ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಅಲಂಕರಿಸಿದ್ದಾರೆ.

ಸೌರವ್‌ ಅವರು ಮುಂದಿನ ತಿಂಗಳು ಮ್ಯಾನ್ಮಾರ್‌ನಲ್ಲಿ ನಡೆಯುವ ಚುಟುಕು ಮಾದರಿಯ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಮತ್ತು ನವೆಂಬರ್‌ನಲ್ಲಿ ಮೆಲ್ಬರ್ನ್‌ನಲ್ಲಿ ನಿಗದಿಯಾಗಿರುವ ದೀರ್ಘ ಮಾದರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Post Comments (+)