ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ರಾಷ್ಟ್ರಗಳ ಜೂನಿಯರ್‌ ಹಾಕಿ ಟೂರ್ನಿ: ಭಾರತ ತಂಡದ ಆಯ್ಕೆ

ಸ್ಪೇನ್‌ನಲ್ಲಿ ಎಂಟು ರಾಷ್ಟ್ರಗಳ ಕಿರಿಯರ ಹಾಕಿ ಟೂರ್ನಿ
Last Updated 14 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಂಟು ರಾಷ್ಟ್ರಗಳ 21 ವರ್ಷದೊಳಗಿನ ಆಟಗಾರರ ಹಾಕಿ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜೂ.10ರಿಂದ ಸ್ಪೇನ್‌ನಲ್ಲಿ ಈ ಟೂರ್ನಿಯು ಆರಂಭವಾಗಲಿದೆ.

ನೆದರ್ಲೆಂಡ್ಸ್‌, ಬೆಲ್ಜಿಯಂ, ಬ್ರಿಟನ್‌, ಆಸ್ಟ್ರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಆತಿಥೇಯ ಸ್ಪೇನ್‌ ದೇಶಗಳೊಂದಿಗೆ ಸೆಣಸಲುಭಾರತ ಸಜ್ಜಾಗಿದೆ. 18 ಸದಸ್ಯರ ಭಾರತ ತಂಡವನ್ನು ಮನದೀಪ್‌ ಮೋರ್‌ ಮುನ್ನಡೆಸಲಿದ್ದರೆ, ಸುಮನ್‌ ಬೆಕ್‌ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಪ್ರಶಾಂತ್‌ಕುಮಾರ್ ಚೌಹಾಣ್‌ ಹಾಗೂ ಪವನ್‌ ಗೋಲ್‌ಕೀಪರ್‌ಗಳ ಪಾತ್ರ ನಿರ್ವಹಿಸಲಿದ್ದಾರೆ. ಡಿಫೆಂಡರ್‌ ಗಳಾಗಿ ನಾಯಕ ಮೋರ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಆಕಾಶ್‌ದೀಪ್‌ ಸಿಂಗ್‌ ಜೂನಿಯರ್‌, ಬೆಕ್‌ ಹಾಗೂ ಪರ ಮ್‌ಪ್ರೀತ್‌ ಸಿಂಗ್‌ ಕಣಕ್ಕಿಳಿಯಲಿದ್ದಾರೆ.

ಮಿಡ್‌ಫೀಲ್ಡ್‌ನಲ್ಲಿ ಯಶ್‌ದೀಪ್‌ ಸಿವಾಚ್‌, ವಿಷ್ಣುಕಾಂತ್‌ ಸಿಂಗ್‌, ರವಿಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌, ಮಣಿಂದರ್‌ ಸಿಂಗ್‌, ವಿಶಾಲ್‌ ಅಂಟಿಲ್‌ ಹಾಗೂ ಫಾರ್ವರ್ಡ್‌ ವಿಭಾಗದಲ್ಲಿ ಅಮನ್‌ದೀಪ್‌ ಸಿಂಗ್‌, ರಾಹುಲ್‌ ಕುಮಾರ್‌ ರಾಜಭರ್‌, ಶಿವಮ್‌ ಆನಂದ್‌ ಹಾಗೂ ಸುದೀಪ್‌ ಚಿರ್ಮಾಕೊ ಮೋಡಿ ಮಾಡಲು ತಯಾರಾಗಿದ್ದಾರೆ.

ತಂಡದ ಆಯ್ಕೆ ಕುರಿತು ಮಾತನಾಡಿರುವ ಹೈ ಪರ್ಫಾಮನ್ಸ್‌ ನಿರ್ದೇಶಕ ಡೇವಿಡ್‌ ಜಾನ್‌ ‘ಇದು ಸವಾಲಿನ ಟೂರ್ನಿಯಾಗಿದ್ದು ಆಟಗಾರರ ಅನುಭವವನ್ನು ವೃದ್ಧಿಸಲಿದೆ. 2021ರ ಜೂನಿಯರ್‌ ವಿಶ್ವಕಪ್‌ಗೆ ಆಟಗಾರರು ಯಾವ ರೀತಿ ತಯಾರಿಯಾಗಿದ್ದಾರೆಂದು ತಿಳಿದುಬರಲಿದೆ’ ಎಂದರು.

ತಂಡ: ಗೋಲ್‌ಕೀಪರ್‌ಗಳು; ಪ್ರಶಾಂತ್‌ ಕುಮಾರ್‌ ಚೌಹಾಣ್‌ ಹಾಗೂ ಪವನ್‌.

ಡಿಫೆಂಡರ್ಸ್‌: ಮನದೀಪ್‌ ಮೋರ್‌ (ನಾಯಕ), ಪ್ರತಾಪ್‌ ಲಾಕ್ರಾ, ಸಂಜಯ್‌, ಆಕಾಶ್‌ದೀಪ್‌ ಸಿಂಗ್‌ ಜೂನಿಯರ್‌, ಸುಮನ್‌ ಬೆಕ್‌ (ಉಪನಾಯಕ) ಹಾಗೂ ಪರಮ್‌ಪ್ರೀತ್‌ ಸಿಂಗ್‌

ಮಿಡ್‌ಫೀಲ್ಡರ್‌ಗಳು: ಯಶ್‌ದೀಪ್‌ ಸಿವಾಚ್‌, ವಿಷ್ಣುಕಾಂತ್‌ ಸಿಂಗ್‌, ರವಿಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌, ಮಣಿಂದರ್‌ ಸಿಂಗ್‌, ವಿಶಾಲ್‌
ಅಂಟಿಲ್‌.

ಫಾರ್ವರ್ಡ್‌ಗಳು:ಅಮನ್‌ದೀಪ್‌ ಸಿಂಗ್‌, ರಾಹುಲ್‌ ಕುಮಾರ್‌ ರಾಜ್‌ಭರ್‌, ಶಿವಮ್‌ ಆನಂದ್‌ ಹಾಗೂ ಸುದೀಪ್‌ ಚಿರ್ಮಾಕೊ ಹಾಗೂ ಪ್ರಭ್‌ಜೋತ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT