ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮುನ್ನೋಟ | ಹಾಕಿ, ಏಕದಿನ ಕ್ರಿಕೆಟ್‌ ವಿಶ್ವಕಪ್‌

Last Updated 1 ಜನವರಿ 2023, 3:09 IST
ಅಕ್ಷರ ಗಾತ್ರ

ಭಾರತ ಆಯೋಜಿಸಲಿರುವ ಪುರುಷರ ಏಕದಿನ ಕ್ರಿಕೆಟ್‌ ವಿಶ್ವಕಪ್‌, ಪುರುಷರ ಹಾಕಿ ವಿಶ್ವ ಚಾಂಪಿಯನ್‌ಷಿಪ್‌, ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಈ ವರ್ಷ ನಡೆಯಲಿರುವ ಪ್ರಮುಖ ಕ್ರೀಡಾಕೂಟಗಳಲ್ಲಿ ಸೇರಿವೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಬಯಸುವ ಭಾರತದ ಅಥ್ಲೀಟ್‌ ನೀರಜ್‌ ಚೋಪ್ರಾ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಎಚ್‌.ಎಸ್‌. ಪ್ರಣಯ್‌ ಮತ್ತಿತರರಿಗೆ ಈ ವರ್ಷ ಮಹತ್ವದ್ದೆನಿಸಿದೆ.

2023ರಲ್ಲಿ ನಡೆಯಲಿರುವ ಪ್ರಮುಖ ಕೂಟಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

*ಪುರುಷರ ಹಾಕಿ ವಿಶ್ವಕಪ್‌: ಜನವರಿ 13ರಿಂದ 29ರವರೆಗೆ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಆಯೋಜನೆಯಾಗಿದೆ.

*ಆಸ್ಟ್ರೇಲಿಯಾ ಓಪನ್ ಟೆನಿಸ್‌: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಜನವರಿ 16ರಿಂದ 29ರವರೆಗೆ ಟೂರ್ನಿ ನಡೆಯಲಿದೆ.

*ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಜನವರಿ 17ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿದೆ.

*ಖೇಲೊ ಇಂಡಿಯಾ ಯೂತ್ ಗೇಮ್ಸ್: ಜನವರಿ 31ರಿಂದ ಫೆಬ್ರುವರಿ 11ರವರೆಗೆ ಮಧ್ಯಪ್ರದೇಶದಲ್ಲಿ ನಡೆಯಲಿದೆ.

*ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಮಾರ್ಚ್‌ 15ರಿಂದ 31ರವರೆಗೆ ಭಾರತದ ನವದೆಹಲಿಯಲ್ಲಿ ಆಯೋಜನನೆಯಾಗಲಿದೆ.

*ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಮಾರ್ಚ್‌ 14ರಿಂದ 19ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

*ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಮಾರ್ಚ್‌ 28ರಿಂದ ಏಪ್ರಿಲ್ 2ರವರೆಗೆ ಭಾರತದ ದೆಹಲಿ ಆತಿಥ್ಯ ವಹಿಸಲಿದೆ.

*ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ಮಾರ್ಚ್‌ ಮೇ 1ರಿಂದ 14ರವರೆಗೆ ನಡೆಯಲಿದೆ.

*ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೇ 3ರಿಂದ 13ರವೆಗೆ ದಕ್ಷಿಣ ಕೊರಿಯಾದ ಜಿಂಜುನಲ್ಲಿ ನಡೆಯಲಿದೆ.

*ದೋಹಾ ಡೈಮಂಡ್‌ ಲೀಗ್ ಅಥ್ಲೆಟಿಕ್ಸ್: ಮೇ 5ರಂದು ಕತಾರ್‌ನಲ್ಲಿ ನಡೆಯಲಿದೆ.

*ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: ದಕ್ಷಿಣ ಕೊರಿಯಾದ ಡರ್ಬನ್‌ನಲ್ಲಿ ಮೇ 22ರಿಂದ 28ರವರೆಗೆ ಆಯೋಜನೆಯಾಗಲಿದೆ.

*ಫ್ರೆಂಚ್‌ ಓಪನ್ ಟೆನಿಸ್‌: ಮೇ 28ರಿಂದ ಜೂನ್‌ 11ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.

*ವಿಂಬಲ್ಡನ್ ಟೆನಿಸ್‌ ಚಾಂಪಿಯನ್‌ಷಿಪ್‌: ಇಂಗ್ಲೆಂಡ್‌ನಲ್ಲಿ ಜುಲೈ 3ರಿಂದ 16ರವರೆಗೆ ನಡೆಯಲಿದೆ.

*ಫಿಫಾ ಮಹಿಳಾ ವಿಶ್ವಕಪ್‌: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ಜುಲೈ 20ರಿಂದ ಆಗಸ್ಟ್‌ 20ರವರೆಗೆ ನಡೆಯಲಿದೆ.

*ವಿಶ್ವ ಈಜು ಚಾಂಪಿಯನ್‌ಷಿಪ್‌: ಜಪಾನ್‌ನ ಫುಕುವೊಕಾದಲ್ಲಿ ಜುಲೈ 14ರಿಂದ 30ರವರೆಗೆ ನಡೆಯಲಿದೆ.

*ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಹಂಗರಿಯ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ 19ರಿಂದ 27ರವರೆಗೆ ನಡೆಯಲಿದೆ.

*ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಡೆನ್ಮಾರ್ಕ್‌ನ ಕೊಪನ್‌ಹೇಗನ್‌ನಲ್ಲಿ ಆಗಸ್ಟ್‌ 21ರಿಂದ 27ರವೆಗೆ ಆಯೋಜನೆಯಾಗಲಿದೆ.

*ಅಮೆರಿಕ ಓಪನ್ ಟೆನಿಸ್‌: ಆಗಸ್ಟ್‌ 28ರಿಂದ ಸೆಪ್ಟೆಂಬರ್‌ 10ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

*ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸೆಪ್ಟೆಂಬರ್‌ 2ರಿಂದ 17ರವರೆಗೆ ನಡೆಯಲಿದೆ.

*ವಿಶ್ವ ರೋಯಿಂಗ್‌ ಚಾಂಪಿಯನ್‌ಷಿಪ್‌: ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಸೆಪ್ಟೆಂಬರ್‌ 3ರಿಂದ 10ರವರೆಗೆ ಆಯೋಜನೆಯಾಗಲಿದೆ.

*ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಸೆಪ್ಟೆಂಬರ್‌ 16ರಿಂದ 24ರವರೆಗೆ ನಡೆಯಲಿದೆ.

*ಏಷ್ಯನ್ ಗೇಮ್ಸ್: ಚೀನಾದ ಹ್ಯಾಂಗ್‌ಜೌನಲ್ಲಿ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್‌ 8ರವರೆಗೆ ನಡೆಯಲಿದೆ.

*ಎಟಿಪಿ ಫೈನಲ್ಸ್: ನವೆಂಬರ್‌ 12ರಿಂದ 18ರವರೆಗೆ ಟುರಿನ್‌ನಲ್ಲಿ ನಡೆಯಲಿದೆ.

*ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್: ಡಿಸೆಂಬರ್‌ 13ರಿಂದ 17ರವರೆಗೆ ನಡೆಯಲಿದ್ದು, ಸ್ಥಳ ನಿಗದಿಯಾಗಿಲ್ಲ.

*ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್‌: ಇನ್ನೂ ದಿನಾಂಕ ಪ್ರಕಟಣೆಯಾಗಿಲ್ಲ (ತಾತ್ಕಾಲಿಕ: ಮಾರ್ಚ್‌ 25ರಿಂದ ಮೇ 28).

*ಪುರುಷರ ಏಕದಿನ ಕ್ರಿಕೆಟ್‌ ವಿಶ್ವಕಪ್‌: ಭಾರತದಲ್ಲಿ ಅಕ್ಟೋಬರ್‌– ನವೆಂಬರ್‌ನಲ್ಲಿ ನಡೆಯಲಿದ್ದು, ಅಧಿಕೃತ ದಿನಾಂಕ ಇನ್ನೂ ನಿಗದಿಯಾಗಿಲ್ಲ.

*ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌: ಇಂಗ್ಲೆಂಡ್‌ನ ಓವಲ್‌ನಲ್ಲಿ ಜೂನ್‌ನಲ್ಲಿ ನಿಗದಿಯಾಗಿದೆ.

*ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್‌: ಕತಾರ್‌ನಲ್ಲಿ ನಿಗದಿಯಾಗಿದ್ದು, ದಿನಾಂಕ ಪ್ರಕಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT