ಭಾನುವಾರ, ಸೆಪ್ಟೆಂಬರ್ 19, 2021
28 °C
ಎರಡು ವರ್ಷಗಳ ಬಳಿಕ ಲೀಗ್‌ ಆರಂಭಕ್ಕೆ ಸಿದ್ಧತೆ

ಪ್ರೊ ಕಬಡ್ಡಿ ಲೀಗ್‌: ಆಗಸ್ಟ್ 29ರಿಂದ ಹರಾಜು ಪ್ರಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುಮಾರು ಎರಡು ವರ್ಷಗಳ ಬಳಿಕ ಪ್ರೊ ಕಬಡ್ಡಿ ಲೀಗ್ ಆಯೋಜನೆಗೆ ವೇದಿಕೆ ಸಜ್ಜುಗೊಂಡಿದೆ. ಎಂಟನೇ ಆವೃತ್ತಿಯ ಲೀಗ್‌ಗೆ ಇದೇ 29ರಿಂದ 31ರವರೆಗೆ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಲೀಗ್‌ನ ಆಯೋಜನಾ ಸಂಸ್ಥೆ ಮಶಾಲ್ ಸ್ಪೋರ್ಟ್ಸ್ ಗುರುವಾರ ಈ ವಿಷಯ ತಿಳಿಸಿದೆ. ಡಿಸೆಂಬರ್‌ನಲ್ಲಿ ಲೀಗ್ ಆರಂಭಿಸುವ ಸಾಧ್ಯತೆಯಿದೆ.

ದೇಶಿ, ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಇವರನ್ನು ಎ,ಬಿ,ಸಿ ಮತ್ತು ಡಿ ಎಂದು ವಿಭಜಿಸಲಾಗುತ್ತದೆ. ಬಳಿಕ ಈ ಆಟಗಾರರನ್ನು ಆಲ್‌ರೌಂಡರ್‌ಗಳು, ಡಿಫೆಂಡರ್ಸ್ ಮತ್ತು ರೇಡರ್‌ಗಳೆಂದು ವಿಂಗಡಿಸಲಾಗುತ್ತದೆ. ಎ ದರ್ಜೆಯ ಆಟಗಾರರಿಗೆ ₹ 30 ಲಕ್ಷ, ಬಿ ದರ್ಜೆಯ ಆಟಗಾರರಿಗೆ ₹ 20 ಲಕ್ಷ, ಸಿ ದರ್ಜೆಗೆ ₹ 10 ಲಕ್ಷ ಮತ್ತು ಡಿ ದರ್ಜೆಯಲ್ಲಿರುವ ಆಟಗಾರರಿಗೆ ₹ 6 ಲಕ್ಷ ಮೂಲ ಬೆಲೆ ನಿಗದಿಪಡಿಸಲಾಗುತ್ತದೆ.

2019ರಲ್ಲಿ ಕೊನೆಯ ಬಾರಿ ಪ್ರೊ ಕಬಡ್ಡಿ ಲೀಗ್ ನಡೆದಿತ್ತು.

ಆಟಗಾರರ ಮೇಲೆ ಹಣ ವಿನಿಯೋಗಿಸಲು ಪ್ರತಿ ಫ್ರಾಂಚೈಸ್‌ಗೆ ₹ 4.4 ಕೋಟಿ ಮೊತ್ತ ನಿಗದಿಪಡಿಸಲಾಗಿದೆ. 500ಕ್ಕಿಂತ ಕಬಡ್ಡಿ ಪಟುಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರು ಮತ್ತು ಏಳನೇ ಆವೃತ್ತಿಯಲ್ಲಿ ಆಡಿದ ಆಟಗಾರರು ಮತ್ತು 2020 ಹಾಗೂ 2021ರ ಎಕೆಎಫ್‌ಐ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಚಾಂಪಿಯನ್‌ಷಿಪ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ ಎಂಟು ಸ್ಥಾನಗಳಲ್ಲಿರುವ ತಂಡಗಳ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮುಖ್ಯಾಂಶಗಳು

*ಮುಂಬೈನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆ

*12 ಫ್ರಾಂಚೈಸ್‌ಗಳು, 500ಕ್ಕೂ ಹೆಚ್ಚು ಆಟಗಾರರು

* ಹರಾಜಿನಲ್ಲಿ ಫ್ರಾಂಚೈಸ್‌ ವಿನಿಯೋಗಿಸಬಹುದಾದ ಮೊತ್ತ ₹4.4 ಕೋಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು