ಸೋಮವಾರ, ನವೆಂಬರ್ 28, 2022
20 °C

ಬ್ಯಾಸ್ಕೆಟ್‌ಬಾಲ್‌: ಎಎಸ್‌ಸಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಣಿಕಂಠ ಮತ್ತುಐಸಾಕ್‌ ಅವರ ಉತ್ತಮ ಆಟದ ನೆರವಿನಿಂದ ಎಎಸ್‌ಸಿ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಜಯ ಸಾಧಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 81–37 ರಲ್ಲಿ ಬಿಸಿವೈಎ ತಂಡವನ್ನು ಮಣಿಸಿತು. ಮಣಿಕಂಠ 18 ಹಾಗೂ ಐಸಾಕ್ 11 ಪಾಯಿಂಟ್ಸ್‌ ತಂದಿತ್ತರು.

ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ 98–43 ರಲ್ಲಿ ಧಾರವಾಡ ತಂಡವನ್ನು ಮಣಿಸಿದರೆ, ಎಂಎನ್‌ಕೆ ರಾವ್‌ ತಂಡ 74– 50 ರಲ್ಲಿ ಬಾಷ್‌ ವಿರುದ್ಧ ಗೆದ್ದಿತು.

ಇತರ ಪಂದ್ಯಗಳಲ್ಲಿ ಬೀಗಲ್ಸ್‌ ಕ್ಲಬ್‌ 80–73 ರಲ್ಲಿ ಮೌಂಟ್ಸ್‌ ಕ್ಲಬ್‌ ವಿರುದ್ಧ; ಬಿ.ಸಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ 91–74 ರಲ್ಲಿ ವಿಮಾನಪುರ ಕ್ಲಬ್‌ ವಿರುದ್ಧ; ಪಿಪಿಸಿ 74–54 ರಲ್ಲಿ ವಿಬಿಸಿ ಮಂಡ್ಯ ವಿರುದ್ಧ; ಜಿಎಸ್‌ಟಿ ಮತ್ತು ಕಸ್ಟಮ್ಸ್‌ 75–69 ರಲ್ಲಿ ಡಿವೈಇಎಸ್‌ ಬೆಂಗಳೂರು ವಿರುದ್ಧ ಜಯಿಸಿದವು.

ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಭಾರತ್‌ ಎಸ್‌ಯು 76– 40 ರಲ್ಲಿ ಧಾರವಾಡದ ಮಲ್ಲಸಜ್ಜನ ಕ್ಲಬ್‌ ವಿರುದ್ಧ; ಬಿ.ಸಿ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ 66– 39 ರಲ್ಲಿ ಸಿಜೆಸಿ ವಿರುದ್ಧ; ನಿಟ್ಟೆಯ ಕೆ.ಎಸ್‌. ಹೆಗ್ಡೆ ತಂಡ 80–37 ರಲ್ಲಿ ಪಟ್ಟಾಭಿರಾಮನ್‌ ಕ್ಲಬ್‌ ವಿರುದ್ಧ; ಡಿವೈಇಎಸ್‌ ವಿದ್ಯಾನಗರ 55–40 ರಲ್ಲಿ ಐಬಿಬಿಸಿ ವಿರುದ್ಧ; ಡಿವೈಇಎಸ್‌ ವಿಜಯಪುರ 54–51 ರಲ್ಲಿ ವಿವೇಕ್ಸ್‌ ಕ್ಲಬ್‌ ವಿರುದ್ಧ ಗೆದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು