ಶುಕ್ರವಾರ, ಜನವರಿ 27, 2023
26 °C

ಬ್ಯಾಸ್ಕೆಟ್‌ಬಾಲ್: ರಾಜಕುಮಾರ್ ಕ್ಲಬ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಮಂತ್ ಮಿಂಚಿನ ಆಟದ ಬಲದಿಂದ ರಾಜಕುಮಾರ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು ರಾಜ್ಯ ಸಂಸ್ಥೆ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಜೆಎಸ್‌ಸಿ ವಿರುದ್ಧ ಜಯಗಳಿಸಿತು. 

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ ನಲ್ಲಿ ನಡೆದ ಪಂದ್ಯದಲ್ಲಿ  ರಾಜಕುಮಾರ್ ತಂಡವು 77–75ರಿಂದ ಜೆಎಸ್‌ಸಿ ವಿರುದ್ಧ ರೋಚಕ ಗೆಲುವು ಸಾಧಿಸಿತು.  ರಾಜಕುಮಾರ್ ತಂಡದ ಸುಮಂತ್ 31 ಮತ್ತು ವೆಂಕಟ್ 12 ಅಂಕಗಳನ್ನು ಗಳಿಸಿದರು. ಜೆಎಸ್‌ಸಿಯ ಕಟ್ಟಿ 25 ಮತ್ತು ಸಂತೋಷ್ 16 ಅಂಕ ಗಳಿಸಿದರು. 

ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ; ಎಎಸ್‌ಸಿ 78–61 (33–29)ರಿಂದ ವಿಮಾನಪುರ ಎಸ್‌ಸಿ ವಿರುದ್ಧ ಗೆದ್ದಿತು. ಎಎಸ್‌ಸಿಯ ಬಲ್ವಾನ್ (22) ಮತ್ತು ರವಿ (16), ವಿಮಾನಪುರ ತಂಡದ ಆದಿತ್ಯ (21) ಹಾಗೂ ವಿಷ್ಣು (14) ಮಿಂಚಿದರು. ಐಬಿಸಿಸಿ 86–80 (44–43) ರಿಂದ ಎಸ್‌ ಬ್ಲ್ಯೂಸ್ ವಿರುದ್ಧ ಗೆದ್ದಿತು. ಐಬಿಬಿಸಿಯ ಸುರೇಶ್ (29), ಯಶವಂತ್ (15) ಹಾಗೂ ಬ್ಲ್ಯೂಸ್‌ನ ಅಭಿಷೇಕ್ ಗೌಡ (39) ಹಾಗೂ ರಂಗನಾಥ್ (16) ಉತ್ತಮವಾಗಿ ಆಡಿದರು. 

ಪಿನಾಕಿನಿ ಜಿ.ಬಿ. ನೂರ್ 69 –47 ರಿಂದ ಬಿಸಿವೈಎ ವಿರುದ್ಧ; ಡಿವೈಇಎಸ್ ಬೆಂಗಳೂರು 83–60ರಿಂದ ಭರತ್ ಎಸ್‌ಯು ವಿರುದ್ಧ; ಕೆಎಸ್‌ಪಿ 88–8ರಿಂದ ಬಾಷ್ ವಿರುದ್ಧ; ವಿವೇಕ್ಸ್ ಎಸ್‌ 65–61ರಿಂದ ದೇವಾಂಗ್ ಯೂನಿಯನ್ ವಿರುದ್ಧ; ಎಂಇಜಿ 88–51 ರಿಂದ ಮೈಸೂರು ಬಿಸಿ ವಿರುದ್ಧ; ಬ್ಯಾಂಕ್ ಆಫ್ ಬರೋಡಾ 119–80ರಿಂದ ಜಿಎಸ್‌ಟಿ–ಕಸ್ಟಮ್ಸ್‌ ವಿರುದ್ಧ; ಎಂಎನ್‌ಕೆ ರಾವ್ ಪಾರ್ಕ್ ಬಿಸಿ 60–55ರಿಂದ ಪಟ್ಟಾಭಿರಾಮ ನಗರ ವಿರುದ್ಧ ಜಯಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು