ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟ | ಕಬಡ್ಡಿ: ಬೆಳಗಾವಿ, ಬಾಗಲಕೋಟೆಗೆ ಗರಿ

ಬೆಂಗಳೂರು ತಂಡಗಳಿಗೆ ಫುಟ್‌ಬಾಲ್‌ ಚಿನ್ನ
Last Updated 6 ಫೆಬ್ರುವರಿ 2020, 17:42 IST
ಅಕ್ಷರ ಗಾತ್ರ

ಬೆಂಗಳೂರು: ಸೊಗಸಾದ ಆಟವಾಡಿದಬಾಗಲಕೋಟೆ ಹಾಗೂಬೆಳಗಾವಿ ತಂಡಗಳು ರಾಜ್ಯ ಮಿಲಿ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಗುರುವಾರ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಕಬಡ್ಡಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿವೆ.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿರುವ ಕೂಟದ ನಾಲ್ಕನೇ ದಿನ ಬಾಗಲಕೋಟೆ ತಂಡವು 31–28 ಪಾಯಿಂಟ್ಸ್‌ನಿಂದ ಕೊಪ್ಪಳ ತಂಡವನ್ನು ಮಣಿಸಿ ಬಾಲಕರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತು. ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಳಗಾವಿ ತಂಡವು 36–6 ಭಾರೀ ಅಂತರದಿಂದ ಕೋಲಾರ ತಂಡವನ್ನು ಮಣಿಸಿತು.

ಫುಟ್‌ಬಾಲ್‌ನಲ್ಲಿ ಬೆಂಗಳೂರಿಗರ ಮಿಂಚು: ಬೆಂಗಳೂರಿನ ಬಾಲಕ ಹಾಗೂ ಬಾಲಕಿಯರ ತಂಡಗಳು ಫುಟ್‌ ಬಾಲ್‌ನಲ್ಲಿ ಚಾಂಪಿಯನ್‌ ಆದವು.

ಬೆಂಗಳೂರು ಬಾಲಕರ ಫುಟ್‌ಬಾಲ್‌ ತಂಡವು ಫೈನಲ್‌ ಹಣಾಹಣಿಯಲ್ಲಿ 7–0 ಗೋಲುಗಳಿಂದ ಬೆಳಗಾವಿ ತಂಡವನ್ನು ಸದೆಬಡಿಯಿತು. ವಿಜೇತ ತಂಡದ ಮೀರ್‌ ಮೊಹಮ್ಮದ್‌ ಮೂಸಾ ಹಾಗೂ ಪ್ರಜ್ವಲ್‌ ಗೌಡ (ತಲಾ ಎರಡು ಗೋಲು) ಮಿಂಚಿದರು. ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದವು.

ಬಾಲಕಿಯರ ವಿಭಾಗದ ಫೈನಲ್‌ ನಲ್ಲಿ ಬೆಂಗಳೂರು ತಂಡವು ದಕ್ಷಿಣ ಕನ್ನಡ ತಂಡದ ಎದುರು 7–0ಯಿಂದ ಗೆದ್ದಿತು. ತಂಡದ ಪರ ಟ್ರಿಯಾ ಮೆನನ್‌ ನಾಲ್ಕು ಗೋಲು ಹೊಡೆದರೆ, ತಿಯಾ ಶೆಟ್ಟಿ ಹ್ಯಾಟ್ರಿಕ್‌ ಸಾಧಿಸಿದರು.

ಟೆನಿಸ್‌: ಟೈಟಸ್‌ಗೆ ಸಿಂಗಲ್ಸ್ ಕಿರೀಟ: ಮಹಿಳಾ ಸೇವಾ ಸಮಾಜ ಟೆನಿಸ್‌ ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ಕೆವಿನ್‌ ಟೈಟಸ್‌ ಅವರು ಅನಂತ್‌ ಜಿ.ಕೆ ಅವರನ್ನು ಮಣಿಸಿ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಜಯಿಸಿದರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಹರ್ಷಿಣಿ ನಾಗರಾಜ್‌ ಅವರು ಫೈನಲ್‌ ಪಂದ್ಯದಲ್ಲಿ ವನ್ಯಾ ಶ್ರೀ ವಾತ್ಸವ್‌ ಅವರಿಗೆ ಸೋಲುಣಿಸಿ ಚಾಂಪಿಯನ್‌ ಆದರು. ಪುರುಷರ ಡಬಲ್ಸ್‌ನಲ್ಲಿ ಅನಂತ್‌ ಕೌಲಗಿ– ಟೈಟಸ್‌ ಜೋಡಿಯು ಲೋಹಿತ್‌ ಕೆ–ಕಿಶನ್‌ ಎಚ್‌.ಎಸ್‌ ಜೋಡಿಯನ್ನು ಪರಾಭವಗೊಳಿಸಿ ಚಿನ್ನ ಗೆದ್ದಿತು.

ಹಾಕಿ: ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣ ದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ಕೂರ್ಗ್‌ ಬಾಲಕಿಯರ ತಂಡವು 10–0 ಗೋಲುಗಳಿಂದ ಮೈಸೂರು ತಂಡವನ್ನು ಸದೆಬಡಿಯಿತು. ವಿಜೇತ ತಂಡದ ದೃಷ್ಟಿ ದೇಚಮ್ಮ ‘ಡಬಲ್‌ ಹ್ಯಾಟ್ರಿಕ್‌’ ಸಾಧಿಸಿದರು. ಹಾಸನ ತಂಡವು ಬೆಂಗಳೂರು ನಗರ ತಂಡದ ಎದುರು 5–0ಯಿಂದ, ಧಾರವಾಡ ತಂಡವು 6–0ಯಿಂದ ಬೆಳಗಾವಿ ತಂಡಗಳ ವಿರುದ್ಧ ಗೆದ್ದವು. ಬಾಲಕರ ವಿಭಾಗದಲ್ಲಿ ಕಲಬುರಗಿ ತಂಡ 3–0ಯಿಂದ ಧಾರ ವಾಡ ಎದುರು, ಬಳ್ಳಾರಿ ತಂಡ 3–2 ರಿಂದ ಕೂಡಿಗೆ ವಿರುದ್ಧ, ಹಾಸನ ತಂಡ 6–2ರಿಂದ ಗದಗ ಎದುರು ಗೆದ್ದವು.

ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದವರು: ಬಾಲಕರು: 40–43 ಕೆಜಿ ವಿಭಾಗ: ಪ್ರಕಾಶ್‌ ಜಿ. ಕೊಟಬಾಗಿ, 43–46 ಕೆಜಿ ವಿಭಾಗ: ನಂದೀಶ್‌ ಎನ್‌, 46–49 ಕೆಜಿ: ದೇವಾಂಶ್‌ ಯಾದವ್‌, 27–30 ಕೆಜಿ: ಹರ್ಷ ಪಿ.ಯು, 30–33 ಕೆಜಿ: ಮಂದಣ್ಣ ಯು.ಆರ್‌., 37–40 ಕೆಜಿ: ರಿತೇಶ್‌ ಪಿ.ಎಂ, 49–52 ಕೆಜಿ: ಲಿಖಿತ್‌.ವಿ. 55–58 ಕೆಜಿ: ಯೋಗೇಶ್‌ ಕೃಷ್ಣ. ಕೆ, 58–61 ಕೆಜಿ: ಅಕ್ಷಯ್‌ ಆರ್‌, 61–71 ಕೆಜಿ: ಮೊಹಮ್ಮದ್‌ ಸಲಿಕ್‌ ಸೈತ್‌

ಬಾಲಕಿಯರು: 27–30 ಕೆಜಿ: ಅಂಶಿ ಎನ್‌.ಎಂ, 30–33 ಕೆಜಿ: ರೋಷಿಕಾ ಎ.ಪಿ, 33–35 ಕೆಜಿ: ಭಕ್ತಿ ಕಾಕಿತ್ಕರ್‌, 37–40 ಕೆಜಿ: ಸೈಯದ್‌ ಸಾರಾ, 40–43 ಕೆಜಿ: ಅರ್ಚನಾ ವಿ.ಎನ್‌, 43–46 ಕೆಜಿ: ಭವ್ಯಾ ಎಂ.ಕೆ, 46–49 ಕೆಜಿ: ಚಿರಿನ್‌ ಜಯಶ್ರೀ ದೇವಿ, 52–55 ಕೆಜಿ: ತಾಶ್ವಿ, 58–61 ಕೆಜಿ: ನಿಶಿ ಆನಂದ್‌, 61–67 ಕೆಜಿ: ಸಾಕ್ಷಿ ಹೆಬ್ಬಾರ್‌.

ಮುತ್ತಣ್ಣ, ಹಲೀಮಾ ವೇಗದ ಓಟಗಾರರು

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ಕೆ.ವೈ. ಮುತ್ತಣ್ಣ ಹಾಗೂ ಹಲೀಮಾ ಫಜ್ಲತ್‌ ಕ್ರಮವಾಗಿ 100 ಮೀ. ಓಟದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.

ಫಲಿತಾಂಶ: ಬಾಲಕರು: 100 ಮೀಟರ್‌ ಓಟ: ಕೆ.ವೈ.ಮುತ್ತಣ್ಣ (ಬೆಂಗಳೂರು ನಗರ, ಕಾಲ: 11.33 ಸೆಕೆಂಡು)–1, ಆಯುಷ್‌ ಆರ್‌.ದೇವಾಡಿಗ (ದಕ್ಷಿಣ ಕನ್ನಡ)–2, ಸಂಜು ಎಚ್‌. ಕೋಲಾರ (ದಕ್ಷಿಣ ಕನ್ನಡ)–3, ಹೈ ಜಂಪ್‌: ರೊನೌಕ್‌ ಶಾನನ್‌ ಕಾರ್ಕಡ (ಉಡುಪಿ, 1.50 ಮೀಟರ್‌)–1, ಮುರುಕುಂದಿ ಗಣೇಶ್‌ ಗೌಡ (ಕಾರವಾರ)–2, ಹನುಮಂತರಾಯ (ತುಮಕೂರು)–3, ಶಾಟ್‌ಪುಟ್‌: ಕುಲದೀಪ್‌ ಕುಮಾರ್‌ (ದಕ್ಷಿಣ ಕನ್ನಡ, 12.88 ಮೀಟರ್‌)–1, ಸತೀಶ್‌ ಹಜಾರಿ (ಬೆಂಗಳೂರು ಗ್ರಾಮಾಂತರ)–2, ಆದವಾನ್‌ ಎಂ. (ಬೆಂಗಳೂರು ನಗರ)–3,

ಬಾಲಕಿಯರು: 100 ಮೀ. ಓಟ: ಹಲೀಮಾ ಫಜ್ಲತ್‌ (ಬೆಂಗಳೂರು ನಗರ, ಕಾಲ: 12.29 ಸೆಕೆಂಡು), ಅನಿತಾ ವಿ (ಕೋಲಾರ)–2, ಜಾನಿಸ್‌ ರೊಸಾರಿಯೊ (ಬೆಂಗಳೂರು ನಗರ)–3, ಹೈಜಂಪ್‌: ಗೌತಮಿ (ದಕ್ಷಿಣ ಕನ್ನಡ, 1.50 ಮೀ.)–1, ಸಮೀಕ್ಷಾ ಎಂ.ಜಿ (ಬೆಂಗಳೂರು ನಗರ)–2, ಅದಿತಿ ಅಯ್ಯರ್‌ (ಬೆಂಗಳೂರು ನಗರ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT