ಮಂಗಳವಾರ, ಸೆಪ್ಟೆಂಬರ್ 27, 2022
27 °C
ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್: ಶಿವಾ, ರಿಧಿಮಾ ವೈಯಕ್ತಿಕ ಚಾಂಪಿಯನ್

ಬಸವನಗುಡಿ ಈಜುಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಸವನಗುಡಿ ಈಜುಕೇಂದ್ರ ತಂಡವು ಭಾನುವಾರ ಮುಕ್ತಾಯವಾದ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. 

ಪಡುಕೋಣೆ–ದ್ರಾವಿಡ್ ಕ್ರೀಡಾ ಉತ್ಕೃಷ್ಟತಾ ಕೇಂದ್ರದ ಈಜುಗೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಬಸವನಗುಡಿ ತಂಡವು ಒಟ್ಟು 468 ಅಂಕಗಳನ್ನು ಕಲೆಹಾಕಿ, ಪ್ರಥಮ ಸ್ಥಾನ ಗಳಿಸಿತು. 350 ಅಂಕಗಳನ್ನು ಗಳಿಸಿದ ಡಾಲ್ಫಿನ್ ಅಕ್ವೆಟಿಕ್ಸ್ ತಂಡವು ರನ್ನರ್ಸ್ ಅಪ್ ಪಡೆಯಿತು. 

ಪುರುಷರ ವೈಯಕ್ತಿಕ ವಿಭಾಗದಲ್ಲಿ ಬಸವನಗುಡಿ ಕೇಂದ್ರದ ಎಸ್. ಶಿವಾ 40 ಅಂಕಗಳು ಹಾಗೂ ಎರಡು ಕೂಟ ದಾಖಲೆ ಮಾಡಿ, ಪ್ರಶಸ್ತಿ ಗಳಿಸಿದರು.  ಇದೇ ಕೇಂದ್ರದ ರಿಧಿಮಾ ವೀರೇಂದ್ರ ಕುಮಾರ್ ಮಹಿಳೆಯರ ವಿಭಾಗದಲ್ಲಿ 43 ಅಂಕ ಗಳಿಸಿ ಚಾಂಪಿಯನ್ ಆದರು. 

ಈ ಕೂಟದಲ್ಲಿ ಒಟ್ಟು 15 ನೂತನ ದಾಖಲೆಗಳನ್ನು ನಿರ್ಮಿಸಿದರು. 

ಫಲಿತಾಂಶಗಳು

ಪುರುಷರ ವಿಭಾಗ
400 ಮೀ ಫ್ರೀಸ್ಟೈಲ್:
ಶಿವಾಂಕ್ ವಿಶ್ವನಾಥ್ (ಗಾಫ್ರೆ ಸ್ವಿಮ್ಮಿಂಗ್ ಪ್ರೊಗ್ರಾಂ; 4ನಿ,13.05ಸೆ)–1, ಧ್ಯಾನ್ ಬಾಲಕೃಷ್ಣ (ಬಸವನಗುಡಿ)–2, ಎನ್. ಧೋನಿಶ್ (ವಿಜಯನಗರ ಈಜುಕೇಂದ್ರ)–3. 

50 ಮೀ ಬ್ಯಾಕ್‌ಸ್ಟ್ರೋಕ್: ಎಸ್. ಶಿವಾ (ಬಸವನಗುಡಿ; 27.19ಸೆ)–1, ಉತ್ಕರ್ಷ್ ಸಂತೋಷ ಪಾಟೀಲ (ಬಸವನಗುಡಿ)–2, ಎಂ. ಧ್ಯಾನ್ (ಗ್ಲೋಬಲ್)–3

200 ಮೀ ಬಟರ್‌ಫ್ಲೈ: ಉತ್ಕರ್ಷ್ ಸಂತೋಷ್ ಪಾಟೀಲ (2ನಿ,7.75ಸೆ)–1, ನಯನ್ ವಿಘ್ನೇಷ್ ಪಿ. (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಕಾರ್ತಿಕೇಯನ್ ನಾಯರ್ (ಡಾಲ್ಫಿನ್)–3

4X100 ಮೀ ಮೆಡ್ಲೆ: ಬಸವನಗುಡಿ ಅಕ್ವೆಟಿಕ್ ಸೆಂಟರ್ ಎ (ಉತ್ಕರ್ಷ್ ಪಾಟೀಲ, ಎಸ್. ಶಿವಾ, ಅದಿತ್ ಸಿಮ್ರನ್ ಒಲೆಟಿ, ಎಂ. ಪೃಥ್ವಿ; 3ನಿ,59.77ಸೆ)–1, ಬಸವನಗುಡಿ ಈಜುಕೇಂದ್ರ ಬಿ (ಆಕಾಶ್ ಮಣಿ, ಡಿ.ಎಸ್. ಪೃಥ್ವಿಕ್, ಅನಿರುದ್ಧ ಮುರಳಿ, ಧ್ಯಾನ್ ಬಾಲಕೃಷ್ಣ)–2, ಡಾಲ್ಫಿನ್ ಅಕ್ವೆಟಿಕ್ಸ್ (ಅನಂತಜೀತ್ ಮುಖರ್ಜಿ, ವಿದಿತ್ ಶಂಕರ್, ಕಾರ್ತಿಕೆಯನ್ ನಾಯರ್, ಆರ್. ಸಂಭವ್)–3

ಮಹಿಳೆಯರ ವಿಭಾಗ
 400 ಮೀ ಫ್ರೀಸ್ಟೈಲ್: ಅಶ್ಮಿತಾ ಚಂದ್ರ (ಗಾಫ್ರೆ; 4ನಿ,41.01ಸೆ)–1, ಶಿರಿನ್ (ಬಸವನಗುಡಿ)–2, ಅದಿತಿ ಎನ್ ಮೂಲ್ಯ (ಬಸವನಗುಡಿ)–3

50 ಮೀ ಬ್ಯಾಕ್‌ಸ್ಟ್ರೋಕ್: ರಿಧಿಮಾ ವೀರೇಂದ್ರ ಕುಮಾರ್ (ಬಸವನಗುಡಿ; 30.48ಸೆ)–1, ನೀನಾ ವೆಂಕಟೇಶ್ (ಡಾಲ್ಫಿನ್ ಅಕ್ವೆಟಿಕ್ಸ್)–2, ಶಾಲಿನಿ ದೀಕ್ಷಿತ್ (ಡಾಲ್ಫಿನ್)–3

200 ಮೀ ಬಟರ್‌ಫ್ಲೈ: ತನಿಷಿ ಗುಪ್ತಾ (ಡಾಲ್ಫಿನ್; 2ನಿ,30.44ಸೆ)–1, ಎ.ಜೆಡಿಡಾ (ಡಿಕೆವಿ)–2, ತನಿಷಾ ವಿನಯ್ (ಬಸವನಗುಡಿ)–3

4X100 ಮೆಡ್ಲೆ: ಡಾಲ್ಫಿನ್ (ಸುವನಾ ಭಾಸ್ಕರ್, ಮಾನವಿ ವರ್ಮಾ, ನೀನಾ ವೆಂಕಟೇಶ್, ಎಸ್. ರುಜುಲಾ; 4ನಿ,33.78ಸೆ)–1, ಬಸವನಗುಡಿ ಎ (ರಿಧಿಮಾ ವೀರೇಂದ್ರಕುಮಾರ್, ಶಿರಿನ್, ಎಸ್. ಲಕ್ಷ್ಯ, ವಿನಿತಾ ನಯನಾ)–2, ಡಾಲ್ಫಿನ್ 2(ಶಾಲಿನಿ ದಿಕ್ಷಿತ್, ಎಸ್. ತಾನ್ಯಾ, ತನಿಷಿ ಗುಪ್ತಾ, ಹಷಿಕಾ ರಾಮಚಂದ್ರ)–3

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು