ಶುಕ್ರವಾರ, ಏಪ್ರಿಲ್ 3, 2020
19 °C

ಈಜು ಚಾಂಪಿಯನ್‌ಷಿಪ್‌: ಬಿಎಸಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರವು (ಬಿಎಸಿ) ಶನಿವಾರ ಮುಕ್ತಾಯಗೊಂಡ 20ನೇ ರಾಜ್ಯ ಶಾರ್ಟ್‌ ಕೋರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು.

ಪಿಇಟಿ ಕ್ರೀಡಾ ಸಮುಚ್ಚಯ ಈಜು ಕೊಳದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡವು ಜೂನಿಯರ್‌ ವಿಭಾಗ ದಲ್ಲಿ 371 ಪಾಯಿಂಟ್‌ ಸಂಗ್ರಹಿಸಿತು. ಡಾಲ್ಫಿನ್‌ ಈಜು ಕೇಂದ್ರವು 308 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.

ಸಬ್‌ ಜೂನಿಯರ್‌ ವಿಭಾಗದಲ್ಲಿ ಡಾಲ್ಫಿನ್‌ ಕೇಂದ್ರ (300 ಪಾಯಿಂಟ್‌) ಪ್ರಥಮ ಹಾಗೂ ಬಿಎಸಿ (195) ದ್ವಿತೀಯ ಸ್ಥಾನ ಗಳಿಸಿದವು. ನಾಲ್ಕು ದಿನಗಳ ಚಾಂಪಿಯನ್‌ಷಿಪ್‌ ನಲ್ಲಿ 23 ಕೂಟ ದಾಖಲೆಗಳು ನಿರ್ಮಾಣವಾದವು.

ಗುಂಪು 1 ಪುರುಷರ ವಿಭಾಗದಲ್ಲಿ ಬಿಎಸಿಯ ಮೋಹಿತ್‌ ವೆಂಕಟೇಶ್‌ (86 ಪಾಯಿಂಟ್‌) ಹಾಗೂ ಮಹಿಳೆ ಯರ ವಿಭಾಗದಲ್ಲಿ ಡಾಲ್ಫಿನ್‌ ಕೇಂದ್ರದ ಸುವನಾ ಸಿ.ಭಾಸ್ಕರ್‌ (285 ಪಾಯಿಂಟ್‌) ವೈಯಕ್ತಿಕ ಚಾಂಪಿಯನ್‌ ಆದರು. ಬಾಲಕಿಯರ ವಿಭಾಗದ ಗುಂಪು 4ಎ ವಿಭಾಗದಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರದ ಕೆ.ಮಾನ್ಯಾ ಕೌಸುಮಿ (42 ಪಾಯಿಂಟ್‌) ಮೊದಲ ಸ್ಥಾನ ಪಡೆದರು.

ಅಂತಿಮ ದಿನ ಮಹಿಳೆಯರ 200 ಮೀ.ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಬಿಎಸಿಯ ಗುಣ ಮಠ ಕೂಟ ದಾಖಲೆ ಬರೆದರು. 2 ನಿಮಿಷ 47.46 ಸೆಕೆಂಡ್‌ಗಳಲ್ಲಿ ಕ್ರಮಿಸಿ ಇದೇ ಕೇಂದ್ರದ ಸಲೋನಿ (2 ನಿ.49.62 ಸೆ.) 2017ರಲ್ಲಿ ನಿರ್ಮಿಸಿದ್ದ ದಾಖಲೆ ಮುರಿದರು. ಬಾಲಕರ ವಿಭಾಗದ (ಗುಂಪು 2) 100 ಮೀ. ಬಟರ್‌ಫ್ಲೈನಲ್ಲಿ ಬಿಎಸಿಯ ಉತ್ಕರ್ಷ್‌ ಎಸ್‌.ಪಾಟೀಲ್‌ ಕೂಟ ದಾಖಲೆ ಸ್ಥಾಪಿಸಿದರು.

ಫಲಿತಾಂಶ: ಪುರುಷರ ವಿಭಾಗ: 100 ಮೀ. ಬಟರ್‌ಫ್ಲೈ: ಜೇ ಏಕಬೋಟೆ (ಡಾಲ್ಫಿನ್‌ ಈಜು ಕೇಂದ್ರ)–1, ಆರ್‌.ವಿಶ್ವನಾಥನ್‌ (ಮತ್ಸ್ಯಇಂಕ್‌)–2; ಕಾಲ: 59.82 ಸೆ.

50 ಫ್ರೀಸ್ಟೈಲ್‌: ಆ್ಯರನ್‌ ಡಿಸೋಜಾ–ಅತಿಥಿ ಈಜುಪಟು (ಡಾಲ್ಫಿನ್‌)–1, ಎಸ್‌.ಕೆ.ಹರ್ಷವರ್ಧನ್‌ (ಬಿಎಸಿ)–2, ಪೃಥ್ವಿಗೌಡ (ಪಿಇಟಿ ಈಜು ಕೇಂದ್ರ)–3; ಕಾಲ: 23.50 ಸೆ.

ಬಾಲಕರು (ಗುಂಪು 2): 400 ಮೀ. ಮೆಡ್ಲೆ: ಸಮರ್ಥ ಆರ್‌.ಮೋರೆ (ಸ್ವಿಮ್ಮರ್ಸ್‌ ಕ್ಲಬ್‌ ಬೆಳಗಾವಿ)–1, ಎಸ್‌.ಅಕ್ಷಜ್ (ಪೂಜಾ ಈಜು ಕೇಂದ್ರ)–2, ಪ್ರಣವ್‌ (ಪೂಜಾ)–3; ಕಾಲ: 5 ನಿ.03.60 ಸೆ.

100 ಮೀ. ಬಟರ್‌ಫ್ಲೈ: ಉತ್ಕರ್ಷ್‌ ಎಸ್‌.ಪಾಟೀಲ್‌ (ಬಿಎಸಿ)–1, ಪಿ.ನಯನ್‌ ವಿಘ್ನೇಶ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ಕಾರ್ತಿಕೇಯನ್‌ (ಡಾಲ್ಫಿನ್‌)–3; ಕಾಲ: 59.09 ಸೆ.

ಗುಂಪು 3: 50 ಮೀ. ಬ್ಯಾಕ್‌ಸ್ಟ್ರೋಕ್‌: ಆರ್ಯನ್‌ ಎ.ಪಾಟೀಲ್‌ (ಸ್ವಿಮ್ಮರ್ಸ್‌ ಕ್ಲಬ್‌)–1, ತನಯ್‌ ಸುರೇಶ್‌ (ವಿಜಯ ನಗರ ಈಜು ಕೇಂದ್ರ)–2, ಕೆ.ಕುಶಲ್‌ (ಬಿಎಸಿ)–3; ಕಾಲ: 33.24 ಸೆ.

ಗುಂಪು 1: 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಲಿತೀಶ್‌ ಗೌಡ (ಬಿಎಸಿ)–1, ಆರ್ಯನ್‌ ಚೌಧರಿ (ಬಿಎಸಿ)–2, ಭುವನ್‌ ಪ್ರಸಾದ್‌ (ಪಿಇಟಿ)–3; ಕಾಲ: 2 ನಿ.28.09 ಸೆ.

ಗುಂಪು 2: 200 ಮೀ.ಬ್ರೆಸ್ಟ್‌ಸ್ಟ್ರೋಕ್‌: ವಿದಿತ್‌ ಎಸ್‌.ಶಂಕರ್‌ (ಡಾಲ್ಫಿನ್‌)–1, ಶುಭಾಂಗ್‌ (ಪೂಜಾ)–2, ಪ್ರಣವ್‌ (ಪೂಜಾ)–3; ಕಾಲ: 2 ನಿ.33.31 ಸೆ.

ಗುಂಪು 3: 100 ಮೀ.ಫ್ರೀಸ್ಟೈಲ್: ಆರ್‌.ನವನೀತ್‌ ಗೌಡ (ಡಾಲ್ಫಿನ್‌)–1, ತನವ್‌ ಕೆ.ಭಾರದ್ವಾಜ್‌ (ಪೂಜಾ)–2, ಶಾರವಿಲ್‌ ಲೋಕೇಶ್‌ ರೆಡ್ಡಿ (ಬೆಂಗಳೂರು ಸ್ವಿಮ್ಮರ್ಸ್‌ ರಿಸರ್ಚ್‌)–3; ಕಾಲ: 1 ನಿ.05.17 ಸೆ.

ಮಹಿಳೆಯರು (ಗುಂಪು 1): 400 ಮೀ. ಮೆಡ್ಲೆ: ಗುಣ ಮಠ (ಬಿಎಸಿ)–1, ಅನುಮತಿ ಚೌಗುಲೆ (ಜಾಫ್ರೆ)–2, ನಿಧಿ ಶಶಿಧರ (ಜಾಫ್ರೆ)–3; ಕಾಲ: 5 ನಿ.27.83 ಸೆ.

200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಗಣ ಮಠ (ಬಿಎಸಿ)–1, ಶಾನಿಯಾ ಗ್ರೇಸ್‌ ಶಿರೋಮಣಿ (ಜಾಫ್ರೆ)–2, ಜಾರಾ ವಿಲಿಯಮ್ಸ್ (ಡಾಲ್ಫಿನ್‌)–3; ಕಾಲ: 2 ನಿ.47.46 ಸೆ.100

ಮೀ.ಬಟರ್‌ ಫ್ಲೈ: ಬಿ.ಇಂಚರಾ (ವಿಜಯನಗರ)–1, ಎನ್‌.ವಿದ್ಯಾಶ್ರೀ (ವಿಜಯನಗರ)–2, ಪಿ.ಕೀರ್ತನಾ (ಬಿಎಸಿ)–3; ಕಾಲ: 1ನಿ.08.73 ಸೆ.

200 ಮೀ.ಫ್ರೀಸ್ಟೈಲ್‌: ಬಿ.ಜಿ.ಮಧುರಾ (ಬಿಎಸಿ)–1, ಬಿ.ಇಂಚರಾ (ವಿಜಯನಗರ)–2, ಪ್ರೀತಿ ವೆಂಕಟೇಶ್‌ (ಬೆಂಗಳೂರು ಸ್ವಿಮ್ಮರ್ಸ್‌ ರಿಸರ್ಚ್‌)–3; ಕಾಲ: 2 ನಿ.14.14 ಸೆ.

25 ಮೀ. ಫ್ರೀಸ್ಟೈಲ್‌: ಸುನೈನಾ ಮಂಜು ನಾಥ್‌ (ಜಾಫ್ರೆ)–1, ಬಿ.ಇಂಚರಾ (ವಿಜಯನಗರ)–2, ಬಿ.ಜಿ.ಮಧುರಾ (ಬಿಎಸಿ)–3; ಕಾಲ: 13.44 ಸೆ.

ಬಾಲಕಿಯರು (ಗುಂಪು 2): 400 ಮೀ. ಮೆಡ್ಲೆ: ಅನ್ಶು ದೇಶಪಾಂಡೆ (ವಿಜಯ ನಗರ)–1, ಎಸ್‌.ಲಕ್ಷ್ಯ (ಪೂಜಾ)–2, ಬಿ.ಎಂ.ರಿತಿಕಾ (ಪೂಜಾ)–3; ಕಾಲ: 5 ನಿ.30.76 ಸೆ.

200 ಮೀ.ಬ್ರೆಸ್ಟ್‌ಸ್ಟ್ರೋಕ್‌: ವಿ.ಹಿತೈಷಿ (ವಿಜಯನಗರ)–1, ಅನ್ವಿತಾ ಎ.ಗೌಡ (ಡಾಲ್ಫಿನ್‌)–2, ಎಸ್‌.ಜಾಹ್ನವಿ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3; ಕಾಲ: 2 ನಿ.48.33 ಸೆ.

ಗುಂಪು 4 ಎ: 50 ಮೀ.ಫ್ರೀಸ್ಟೈಲ್‌: ಕೆ.ಮಾನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜು ಕೇಂದ್ರ)–1, ಪ್ರಿಯಾಂಶಿ ಮಿಶ್ರಾ (ಜಾಫ್ರೆ)–2, ಸಂಜನಾ ನವೀನ್‌ (ಡಾಲ್ಫಿನ್‌)–3; ಕಾಲ: 31.71 ಸೆ.

4x25 ಮೀ. ಮೆಡ್ಲೆ ರಿಲೆ: ನೆಟ್ಟಕಲ್ಲಪ್ಪ ಈಜು ಕೇಂದ್ರ (ಪ್ರತಿಷ್ಟಾ ಕಮಲೇಶ್‌, ತಾನ್ವಿ ರವಿ, ಮಾನ್ಯಾ, ಎನ್‌.ಹಿತಶ್ರೀ)–1, ಡಾಲ್ಫಿನ್‌ (ಶ್ರಾವ್ಯಾ, ಧಿನಿಧಿ, ಸುಹಾಸಿನಿ, ಸಂಜನಾ)–2, ಜಾಫ್ರೆ (ಪ್ರಿಯಾನ್ಶಿ ತಾನ್ಯಾ, ರಿಧಿಮಾ, ಸಂಜನಾ)–3; ಕಾಲ: 1 ನಿ.10.85 ಸೆ.

ಚಾಂಪಿಯನ್ಸ್‌: ಪುರುಷರು/ಬಾಲಕರು: ಗುಂಪು 1: ಮೋಹಿತ್‌ (ಬಿಎಸಿ; 86 ಪಾಯಿಂಟ್ಸ್‌), ಗುಂಪು 2: ಉತ್ಕರ್ಷ್‌ ಎಸ್‌.ಪಾಟೀಲ್‌ (ಬಿಎಸಿ; 235), ಗುಂಪು 3: ರೇಣುಕಾಚಾರ್ಯ (ಡಾಲ್ಫಿನ್‌; 35), ಗುಂಪು 4 ಎ: ಮೋನಿಷ್‌ (ಪೂಜಾ; 41), ಗುಂಪು 4 ಬಿ: ನೈತಿಕ್‌ (ಮಂಗಳಾ; 35).

ಮಹಿಳೆಯರು/ಬಾಲಕಿಯರು: ಗುಂಪು 1: ಸುವನಾ ಸಿ.ಭಾಸ್ಕರ್‌ (ಡಾಲ್ಫಿನ್‌; 285 ಪಾಯಿಂಟ್ಸ್‌), ಗುಂಪು 2: ನೀನಾ ವೆಂಕಟೇಶ್‌ (ಡಾಲ್ಫಿನ್‌; 242), ಗುಂಪು 3: ಮಾನವಿ ವರ್ಮ (ಡಾಲ್ಫಿನ್‌; 31), ಗುಂಪು 4ಎ: ಮಾನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜು ಕೇಂದ್ರ; 42), ಗುಂಪು 4 ಬಿ: ಧಿನಿಧಿ (ಡಾಲ್ಫಿನ್‌; 49).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು