ಗುರುವಾರ , ಮೇ 19, 2022
23 °C

ನೆಟ್‌ಬಾಲ್: ಹಾಸನ, ಬೆಂಗಳೂರು ತಂಡಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ನಗರ ಮತ್ತು ಹಾಸನ ತಂಡಗಳು ರಾಜ್ಯ ಮಿನಿ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಕನಕಪುರದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಬಾಲಕರ ಫೈನಲ್‌ನಲ್ಲಿ ಬೆಂಗಳೂರು ನಗರ ತಂಡವು 34–31ರಿಂದ ಹಾಸನ ತಂಡಕ್ಕೆ ಸೋಲುಣಿಸಿತು. 

ಸೆಮಿಫೈನಲ್ ಪಂದ್ಯಗಳಲ್ಲಿ ಬೆಂಗಳೂರು ನಗರ 20–12ರಿಂದ ಬೆಳಗಾವಿ ಎದುರು, ಹಾಸನ 27–12ರಿಂದ ಚಾಮರಾಜನಗರ ವಿರುದ್ಧ ಜಯ ಸಾಧಿಸಿದ್ದವು.

ಬಾಲಕಿಯರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಸನ 43–18ರಿಂದ ಬೆಂಗಳೂರು ನಗರ ತಂಡಕ್ಕೆ ಸೋಲುಣಿಸಿತು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಬೆಂಗಳೂರು ನಗರ 22–16ರಿಂದ ಮೈಸೂರು ತಂಡವನ್ನು, ಹಾಸನ 18–10ರಿಂದ ಚಾಮರಾಜನಗರ ತಂಡವನ್ನು ಮಣಿಸಿದವು.

ಮಿನಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ತಂಡಗಳು: ಬಾಲಕರು: ಬೆಂಗಳೂರು ನಗರ, ಹಾಸನ, ಚಾಮರಾಜನಗರ, ಬೆಳಗಾವಿ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ.

ಬಾಲಕಿಯರು: ಬೆಂಗಳೂರು ನಗರ, ಹಾಸನ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.