ಬಳ್ಳಾರಿ: ಏಷ್ಯನ್ ಪದಕವಿಜೇತ ಬಾಕ್ಸರ್ ಸುಮಿತ್ ಸಂಗ್ವಾನ್ ಬುಧವಾರ ಇಲ್ಲಿಯ ಇನ್ಸ್ಪಾಯರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಆರಂಭವಾದ ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
ಹರಿಯಾಣದ ಸುಮಿತ್ 86 ಕೆಜಿ ವಿಭಾಗದ ಬೌಟ್‌ನಲ್ಲಿ ಆಂಧ್ರದ ಹರೀಶ್ ಪ್ರಸಾದುಲಾ ವಿರುದ್ಧ ಜಯಿಸಿದರು. ಹರಿಯಾಣದ ಸುಮಿತ್ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.
2019ರ ಪ್ರೆಸಿಡೆಂಟ್ಸ್ ಕಪ್ ಚಿನ್ನದ ಪದಕ ವಿಜೇತ ನೀರಜ್ ಸ್ವಾಮಿ 48 ಕೆಜಿ ವಿಭಾಗದಲ್ಲಿ 5–0 ಯಿಂದ ಹರಿಯಾಣದ ಸಾಗರ್ ವಿರುದ್ಧ ಜಯಿಸಿದರು.
54 ಕೆಜಿ ವಿಭಾಗದಲ್ಲಿ ಪಂಜಾಬ್‌ನ ರಾಜಪಿಂದರ್ ಸಿಂಗ್ 5–0ಯಿಂದ ರಾಹುಲ್ ನಿಲ್ತು ವಿರುದ್ಧ ಗೆದ್ದರು. 75 ಕೆಜಿ ವಿಭಾಗದಲ್ಲಿ ನಿಖಿಲ್ ದುಬೆ ಗುಜರಾತಿನ ಸೆಜಾದ್ ಲಿಲ್ಗಾರ್ ವಿರುದ್ಧ ಗೆದ್ದರೆ, ಛತ್ತೀಸಗಡದ ದಿನೇಶ್ ಕುಮಾರ್ 3–2ರಿಂದ ಬಂಗಾಳದ ಅಭಿಷೇಕ್ ಶಾ ವಿರುದ್ಧ ಜಯಿಸಿದರು.
ಈ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸುವ ಬಾಕ್ಸರ್‌ಗಳು ಮುಂದಿನ ತಿಂಗಳು ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಿಟ್ಟಿಸಲಿದ್ದಾರೆ. ಇದೇ 24ರಂದು ಫೈನಲ್ ಪಂದ್ಯಗಳು ನಡೆಯಲಿವೆ ಎಂದು ಬಾಕ್ಸಿಂಗ್ ಫೆಡರೇಷನ್ ಮೂಲಗಳು ತಿಳಿಸಿವೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.