ಬುಧವಾರ, ಜೂನ್ 23, 2021
23 °C

ಈಜು: ಕರ್ನಾಟಕದ ಸ್ಪರ್ಧಿಗಳ ‍ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜಕೋಟ್‌: ಕರ್ನಾಟಕದ ಈಜು ಸ್ಪರ್ಧಿಗಳು ರಾಜಕೋಟ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ದಿನವಾದ ಶನಿವಾರ ಉತ್ತಮ ಸಾಧನೆ ಮಾಡಿದರು.

ಬಾಲಕಿಯರ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ರಾಜ್ಯದ ಖುಷಿ ದಿನೇಶ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬಾಲಕರ 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕರ್ನಾಟಕದ ಇಶಾನ್‌ ಮೆಹ್ರಾ ಮತ್ತೊಂದು ಚಿನ್ನ ಗೆದ್ದರು.

ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಪ್ರಿಯಾಂಶಿ ಮಿಶ್ರಾಗೆ ಚಿನ್ನದ ಪದಕ ಒಲಿಯಿತು.  

50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಕರ್ನಾಟಕದ ಹಿತೇನ್‌ ಮಿತ್ತಲ್‌ ಚಿನ್ನದ ಪದಕದ ಸಾಧನೆ ಮಾಡಿದರು. ಬಾಲಕಿಯರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಾಜ್ಯದ ಸುವನಾ ಭಾಸ್ಕರ್‌ ಚಿನ್ನದ ಪದಕ ಗೆದ್ದರು.

ಬಾಲಕರ 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ತನಯ್‌ ಸುರೇಶ್‌ ಬೆಳ್ಳಿಗೆ ತೃಪ್ತಿಪಟ್ಟರು. ಬಾಲಕಿಯರ 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಕರ್ನಾಟಕದ ರಿಜುಲ್‌ ಬಿ ಪಾಟೀಲ ಕಂಚಿನ ಪದಕ ಗೆದ್ದುಕೊಂಡರು. ಬಾಲಕಿಯರ 50 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್‌ ಬೆಳ್ಳಿ ಗೆದ್ದರು.  ತನೀಶ್‌ ಜಾರ್ಜ್‌ ಮ್ಯಾಥ್ಯು ಕಂಚು ಪಡೆದರು.

ಬಾಲಕರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ರಾಜ್ಯದ ರೇಣುಕಾಚಾರ್ಯ ಹಾದಿಮನಿ ಅವರು ಕಂಚು ಗೆದ್ದರು. ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಮಾನವಿ ವರ್ಮಾ ಬೆಳ್ಳಿ ಪದಕ ಗೆದ್ದರು. ಬಾಲಕಿಯರ 100 ಮೀ ಬಟರ್‌ಫ್ಲೈ ಸ್ಪರ್ಧೆಯ ಬೆಳ್ಳಿ ಲಿತೇಶಾ ಮಂದಣ್ಣ ಪಾಲಾಯಿತು.

ಬಾಲಕಿಯರ 200 ಮೀ ಬ್ಯಾಕ್‌ ಸ್ಟ್ರೋಕ್‌ ವಿಭಾಗದಲ್ಲಿ ಕರ್ನಾಟಕದ ಸಲೋನಿ ದಲಾಲ್‌ ಬೆಳ್ಳಿ ಹಾಗೂ ಆರುಷಿ ಮಂಜುನಾಥ ಕಂಚು ಗೆದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು