ಟೇಬಲ್‌ ಟೆನಿಸ್‌: ಆಕಾಶ್‌, ಸಹನಾಗೆ ಪ್ರಶಸ್ತಿ

ಗುರುವಾರ , ಜೂಲೈ 18, 2019
27 °C
ಕಾಸ್ಮಸ್‌ ಕಪ್‌ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌

ಟೇಬಲ್‌ ಟೆನಿಸ್‌: ಆಕಾಶ್‌, ಸಹನಾಗೆ ಪ್ರಶಸ್ತಿ

Published:
Updated:
Prajavani

ಹುಬ್ಬಳ್ಳಿ: ಬೆಂಗಳೂರಿನ ವಿನ್ನರ್ಸ್‌ ಕ್ಲಬ್‌ ಪ್ರತಿನಿಧಿಸುವ ಸಹನಾ ಎಚ್‌. ಮೂರ್ತಿ ಹಾಗೂ ಸ್ಕೈಸ್‌ ಕ್ಲಬ್‌ನ ಕೆ.ಜೆ. ಆಕಾಶ್‌, ಧಾರವಾಡದಲ್ಲಿ ಭಾನುವಾರ ಮುಕ್ತಾಯವಾದ ಕಾಸ್ಮಸ್‌ ಕಪ್ ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಕಾಸ್ಮಸ್‌ ಕ್ಲಬ್‌ನಲ್ಲಿ ನಡೆದ ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸಹನಾ 11-8, 11-7, 11-6ರಲ್ಲಿ ಪಿ.ಎಂ. ಶ್ವೇತಾ ಎದುರು ಜಯಿಸಿದರು. ಸಬ್‌ ಜೂನಿಯರ್‌ ಬಾಲಕಿಯರ ಸೆಮಿಫೈನಲ್‌ ಪಂದ್ಯಗಳಲ್ಲಿ ಸಹನಾ 7-11, 11-4, 10-12, 11-9, 11-5ರಲ್ಲಿ ಎ. ನಿಹಾರಿಕಾ ಮೇಲೂ, ಶ್ವೇತಾ 12-10, 8-11, 13-11, 11-6ರಲ್ಲಿ ತೃಪ್ತಿ ಪುರೋಹಿತ್‌ ವಿರುದ್ಧವೂ ಗೆದ್ದರು.

ಬಾಲಕರ ಸಿಂಗಲ್ಸ್‌ನ ಫೈನಲ್‌ನಲ್ಲಿ ಆಕಾಶ್ 11-7, 11-7, 11-4ರಲ್ಲಿ ತಮ್ಮದೇ ಕ್ಲಬ್‌ನ ಶ್ರೀಕಾಂತ ಕಶ್ಯಪ್‌ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಆಕಾಶ್‌ 9-11, 14-12, 11-7, 8-11, 12-10ರಲ್ಲಿ ಸಮ್ಯಕ್ ಕಶ್ಯಪ್‌ ಮೇಲೂ, ಶ್ರೀಕಾಂತ ಕಶ್ಯಪ್‌ 11-2, 8-11, 9-11, 14-12, 11-2ರಲ್ಲಿ ಎ.ಆರ್‌. ಋಷಿಕೇಶ್ ವಿರುದ್ಧವೂ ಗೆದ್ದರು. ಜೂನಿಯರ್‌ ಬಾಲಕರ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ ಆಕಾಶ್ 11-6, 8-11, 11-5, 11-4, 11-4ರಲ್ಲಿ ಯಶವಂತ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು. ಸೆಮಿಫೈನಲ್‌ಗಳಲ್ಲಿ ಆಕಾಶ್‌ 11-5, 11-6, 11-7, 11-9ರಲ್ಲಿ ಸಮ್ಯಕ್ ಕಶ್ಯಪ್‌ ಮೇಲೂ, ಯಶವಂತ್ 11-0, 9-11, 11-7, 12-10, 8-11, 15-13ರಲ್ಲಿ ಪಿ.ವಿ. ಶ್ರೀಕಾಂತ ಕಶ್ಯಪ್‌ ವಿರುದ್ಧವೂ ಗೆದ್ದರು.

ಬಾಲಕಿಯರ ವಿಭಾಗದಲ್ಲಿ ಸ್ಕೈಸ್‌ ಕ್ಲಬ್‌ನ ಯಶಸ್ವಿನಿ ಘೋರ್ಪಡೆ 11-8, 11-6, 11-8, 12-14, 11-6ರಲ್ಲಿ ಅದಿತಿ ಪಿ. ಜೋಶಿ ಎದುರು ಜಯಿಸಿ ಚಾಂಪಿಯನ್‌ ಆದರು.  ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅದಿತಿ 11-9, 11-8, 11-4, 11-8ರಲ್ಲಿ ಪಿ.ಎಂ. ಶ್ವೇತಾ ಮೇಲೂ, ಯಶಸ್ವಿನಿ 11-4, 11-8, 11-8, 11-6ರಲ್ಲಿ ರೈನಾ ನಾರ್ ವಿರುದ್ಧವೂ ಜಯ ಸಾಧಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !