ಗೊಂಡೊಮರ್, ಪೋರ್ಚುಗಲ್: ಭಾರತ ಟೇಬಲ್ ಟೆನಿಸ್ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಕ್ವಾಲಿಫೈಯರ್ ಪ್ಲೇ ಆಫ್ ಪಂದ್ಯದಲ್ಲಿ ಜೆಕ್ ಗಣರಾಜ್ಯ ತಂಡಕ್ಕೆ 1–3ರಿಂದ ಸೋತಿತು. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ಗೆ ರಹದಾರಿ ಪಡೆಯುವ ಅವಕಾಶವೊಂದನ್ನು ಕಳೆದುಕೊಂಡಿತು.

ಜಿ. ಸತ್ಯನ್ ಹಾಗೂ ಅನುಭವಿ ಆಟಗಾರ ಶರತ್ ಕಮಲ್ ಅವರನ್ನೊಳಗೊಂಡ ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ, ತನಗಿಂತ ಕೆಳ ಕ್ರಮಾಂಕದ ಜೆಕ್ ತಂಡವನ್ನು ಮಣಿಸುವ ನಿರೀಕ್ಷೆಯಿತ್ತು. ಆದರೆ ಮೊದಲ ಡಬಲ್ಸ್ ಪಂದ್ಯದಲ್ಲಿ ಶರತ್–ಹರ್ಮಿತ್ ದೇಸಾಯಿ ಜೋಡಿಯು 1–3ರಿಂದ ಥಾಮಸ್ ಪೊಲೊನ್ಸ್ಕಿ– ಲುಬೊಮಿರ್ ಜಾನ್ಸಾರಿಕ್ ಎದುರು ಪರಾಭವ ಕಂಡಿತು.

ಶರತ್ ತಾನಾಡಿದ ಸಿಂಗಲ್ಸ್ ಪಂದ್ಯದಲ್ಲಿ ಜಾನ್ಸಾರಿಕ್ ಎದುರು 3–1ರಿಂದ ಗೆದ್ದರು. ಆದರೆ ಸತ್ಯನ್ ಅವರು ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಪರಾಜಯ (0–3 ಮತ್ತು 2–3ರಿಂದ) ಕಾಣುವುದರೊಂದಿಗೆ ಶರತ್ ಗೆಲುವು ವ್ಯರ್ಥವಾಯಿತು.

ಭಾರತ ಮಹಿಳಾ ತಂಡವೂ ಶನಿವಾರ ಫ್ರಾನ್ಸ್ಗೆ 2–3ರಿಂದ ಮಣಿಯುವ ಮೂಲಕ ಒಲಿಂಪಿಕ್ಸ್ ಅರ್ಹತೆ ಗಳಿಸುವಲ್ಲಿ ವಿಫಲವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.