ಸೋಮವಾರ, ಜನವರಿ 18, 2021
26 °C

ಶೂಟಿಂಗ್‌: ಶೂಟರ್ ತೇಜಸ್ವಿನಿ ಸಾವಂತ್‌ಗೆ ಅಗ್ರಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂಜುಮ್‌ ಮೌದ್ಗಿಲ್ ಸವಾಲು ಮೀರಿದ ಅನುಭವಿ ಶೂಟರ್ ತೇಜಸ್ವಿನಿ ಸಾವಂತ್ ಅವರು ಮಹಿಳೆಯರ 50 ಮೀಟರ್ ರೈಫಲ್ ತ್ರಿ ಪೋಸಿಷನ್ಸ್ ಟಿ1 ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದರು.

ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ, ಮಹಾರಾಷ್ಟ್ರದ ತೇಜಸ್ವಿನಿ 458.7 ಪಾಯಿಂಟ್ಸ್ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಅವರು 1171 ಪಾಯಿಂಟ್ಸ್ ಕಲೆಹಾಕಿದ್ದರು.

ಫೈನಲ್ಸ್‌ನಲ್ಲಿ ಅಂಜುಮ್ 457.8 ಪಾಯಿಂಟ್ಸ್ ಗಳಿಸಿದರು. ಅರ್ಹತಾ ಸುತ್ತನ್ನು ಅಂಜುಮ್‌ (1167) ಮೂರನೆಯವರಾಗಿ ಕೊನೆಗೊಳಿಸಿದ್ದರು. ಮಧ್ಯಪ್ರದೇಶದ ಸುನಿಧಿ ಚೌಹಾನ್‌ (1168) ಎರಡನೇ ಸ್ಥಾನ ಗಳಿಸಿದ್ದರು.

ಅರ್ಹತಾ ಸುತ್ತಿನಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಹರಿಯಾಣದ ನಿಶ್ಚಲ್‌, ಫೈನಲ್ಸ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಬೆರಗು ಮೂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು