ಶುಕ್ರವಾರ, ಸೆಪ್ಟೆಂಬರ್ 17, 2021
22 °C

Tokyo Olympics: ಕ್ರೀಡಾಕೂಟದಲ್ಲಿ ಮತ್ತೆ 17 ಜನರಲ್ಲಿ ಕೋವಿಡ್ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊದ ಒಡೈಬಾದಲ್ಲಿ ಒಲಿಂಪಿಕ್ಸ್‌ ಲಾಂಛನ –ಎಎಫ್‌ಪಿ ಚಿತ್ರ

ಟೋಕಿಯೊ: ಶನಿವಾರ ಕ್ರೀಡಾಗ್ರಾಮದಲ್ಲಿ 17 ಜನರಿಗೆ ಕೋವಿಡ್‌–19 ದೃಢಪಟ್ಟಿರುವುದಾಗಿ ಒಲಿಂಪಿಕ್ಸ್‌ ಆಯೋಜಕರು ಪ್ರಕಟಿಸಿದ್ದಾರೆ. ಶುಕ್ರವಾರ ಸಂಜೆ 2020ರ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ.

ಕ್ರೀಡಾಪಟುಗಳು, ಆಯೋಜಕರು ಹಾಗೂ ಪತ್ರಕರ್ತರು ಸೇರಿದಂತೆ ಕ್ರೀಡಾಕೂಟದಲ್ಲಿ ಭಾಗಿಯಾಗಿರುವವರ ಪೈಕಿ ಈವರೆಗೂ ಒಟ್ಟು 123 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಈವರೆಗೂ 12 ಅಥ್ಲೀಟ್‌ಗಳಿಗೆ ಕೋವಿಡ್‌–19 ದೃಢಪಟ್ಟಿದೆ. ಸೋಂಕು ಪತ್ತೆಯಾದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗುತ್ತಿದೆ. ಗೇಮ್ಸ್‌ಗಳಲ್ಲಿ ಭಾಗವಹಿಸಿರುವವರ ಪೈಕಿ ಶನಿವಾರ 14 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Tokyo Olympics: ಪದಕ ಬೇಟೆ ಆರಂಭ; ಮೊದಲ ಚಿನ್ನ ಗೆದ್ದ ಚೀನಾ ಶೂಟರ್

ಜೆಕ್‌ ದೇಶದ ಕ್ರೀಡಾಪಟುಗಳ ಪೈಕಿ ಆರು ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಟೋಕಿಯೊಗೆ ಬರುವ ಸಮಯದಲ್ಲಿ ಆರೋಗ್ಯ ಸುರಕ್ಷತೆಗೆ ಅವರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಒಲಿಂಪಿಕ್‌ ಸಮಿತಿಯು ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.
 
ಅದಾಗಲೇ ಕ್ರೀಡಾಕೂಟದಲ್ಲಿ ಪದಕ ಬೇಟೆ ಆರಂಭವಾಗಿದ್ದು, ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದಲ್ಲಿ ಚೀನಾದ ಯಾಂಗ್‌ ಚಿಯಾನ್‌ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇಳವೆನ್ನಿಲ ವಾಳರಿವನ್ ಹಾಗೂ ಅಪೂರ್ವಿ ಚಾಂಡೇಲ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

ಆರ್ಚರಿ ಮಿಶ್ರ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು