ಸೋಮವಾರ, ಸೆಪ್ಟೆಂಬರ್ 20, 2021
20 °C

Tokyo Olympics | ಬಾಕ್ಸರ್ ಪೂಜಾ ರಾಣಿಗೆ ಕೈತಪ್ಪಿದ ಕಂಚು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಭಾರತದ ಪದಕದ ಭರವಸೆಯಾಗಿದ್ದ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಪದಕದ ಕನಸು ಕಮರಿದೆ.

ಶನಿವಾರ ನಡೆದ ಮಹಿಳೆಯರ ಮಿಡ್ಲ್‌ವೇಟ್ (75 ಕೆ.ಜಿ.) ವಿಭಾಗದಲ್ಲಿ ಪೂಜಾ ರಾಣಿ, ಚೀನಾದ ಚಿಯಾನ್ ಲೀ ವಿರುದ್ಧ 5-0ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ: 

ಇದರೊಂದಿಗೆ ಲವ್ಲಿನಾ ಬೊರ್ಗೊಹೈನ್ ಅವರ ಅದೇ ಸಾಧನೆ ಸರಿಗಟ್ಟಲು ಸಾಧ್ಯವಾಗಲಿಲ್ಲ. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಲವ್ಲಿನಾ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.

 

 

 

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 30 ವರ್ಷದ ಪೂಜಾ, ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಡುವ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಆದರೆ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಚೀನಾದ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪದಕ ಕೈತಪ್ಪಿದೆ.

 

ಎರಡು ಬಾರಿಯ ಏಷ್ಯನ್ ಚಾಂಪಿಯನ್, ಛಲಗಾರ್ತಿ ಪೂಜಾ ವೃತ್ತಿ ಜೀವನಕ್ಕೆ ಮಾರಕವಾಗಿದ್ದ ಭುಜ ನೋವಿನಿಂದ ಚೇತರಿಸಿಕೊಂಡು ಮತ್ತೆ ಬಾಕ್ಸಿಂಗ್ ರಿಂಗ್‌ಗಿಳಿದಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು