ಬುಧವಾರ, ಸೆಪ್ಟೆಂಬರ್ 29, 2021
20 °C

Tokyo Olympics | ಸ್ಪ್ರಿಂಗ್ಬೋರ್ಡ್‌: ಕ್ಸೀ ಸಿಯಿಗೆ ‘ಡಬಲ್’ ಸಂಭ್ರಮ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಗಾಳಿಯಲ್ಲಿ ದೇಹವನ್ನು ತೂರಿ ವೈವಿಧ್ಯತೆ ಮೆರೆದ ಚೀನಾದ ಕ್ಸೀ ಸಿಯಿ ಅವರು ಒಲಿಂಪಿಕ್ಸ್‌ನ ಪುರುಷರ ಸ್ಪ್ರಿಂಗ್‌ಬೋರ್ಡ್‌ ಸ್ಪರ್ಧೆಯಲ್ಲಿ ‘ಚಿನ್ನ ಡಬಲ್‌’ ಸಂಭ್ರಮದಲ್ಲಿ ಮಿಂದರು.

ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ 20 ವರ್ಷಗಳಲ್ಲಿ ವೈಯಕ್ತಿಕ ಮತ್ತು ಸಿಂಕ್ರನೈಸ್ಟ್‌ ಮೂರು ಮೀಟರ್ಸ್ ಸ್ಪ್ರಿಂಗ್‌ಬೋರ್ಡ್‌ನಲ್ಲಿ ಚಾಂಪಿಯನ್‌ ಆದ ಮೊದಲ ಪುರುಷ ಡೈವರ್‌ ಎನಿಸಿಕೊಂಡರು. ಚೀನಾದವರೇ ಆದ ಕ್ಸಿಯಾಂಗ್ ನೀ 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. 

ಸ್ಪ್ರಿಂಗ್‌ಬೋರ್ಡ್‌ನಲ್ಲಿ ಚೀನಾ ಪಾರಮ್ಯ ಮೆರೆಯಿತು. ಕ್ಸೀ ಸಿಯಿ ಅವರ ಚಿನ್ನದ ಸಾಧನೆಯ ಬೆನ್ನಲ್ಲೇ 19 ವರ್ಷದ ವಾಂಗ್‌ ಜೊಂಗ್ಯಾನ್ ಬೆಳ್ಳಿ ಪದಕ ಗೆದ್ದುಕೊಂಡರು. ಬ್ರಿಟನ್‌ನ ಜ್ಯಾಕ್ ಲಾಘರ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸ್ಪರ್ಧೆಯ ಉದ್ದಕ್ಕೂ ಅಗ್ರಸ್ಥಾನಗಳನ್ನು ಉಳಿಸಿಕೊಂಡು ಬಂದ ಕ್ಸೀ ಮತ್ತು ವಾಂಗ್ ಕ್ರಮವಾಗಿ 558.75  ಮತ್ತು 534.90 ಪಾಯಿಂಟ್ಸ್ ಕಲೆಹಾಕಿದರು. ಸ್ಪರ್ಧೆಯ ನಂತರ ಜೋರಾಗಿ ಕಿರುಚಾಡಿ ಸಂಭ್ರಮ ವ್ಯಕ್ತಪಡಿಸಿದರು. 

ಬುಧವಾರ ನಡೆಯಲಿರುವ 10 ಮೀಟರ್ಸ್ ಪ್ಲಾಟ್‌ಫಾರ್ಮ್‌ ವಿಭಾಗದಲ್ಲಿ ಚೀನಾದ ಚೆನ್ ಯುಕ್ಸಿ ಚಿನ್ನ ಗೆಲ್ಲುವ ನೆಚ್ಚಿನ ಡೈವರ್ ಎನಿಸಿದ್ದಾರೆ. ಅವರಿಗೆ ಈಗ 15 ವರ್ಷ ವಯಸ್ಸು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು