ಭಾನುವಾರ, ಸೆಪ್ಟೆಂಬರ್ 19, 2021
25 °C

Tokyo Olympics | ಭಾರತದ ಆರ್ಚರಿ ಪುರುಷರ ತಂಡದ ಅಭಿಯಾನ ಅಂತ್ಯ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಕೊರಿಯಾ ಎದುರು ಮುಗ್ಗರಿಸಿದ ಭಾರತದ ಆರ್ಚರಿ ಪುರುಷರ ತಂಡವು ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೋಮವಾರ ಆರ್ಚರಿ ಪುರುಷರ ತಂಡ ವಿಭಾಗದಲ್ಲಿ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್ ಅವರನ್ನೊಳಗೊಂಡ ಭಾರತ ತಂಡವು ಕೊರಿಯಾ ವಿರುದ್ಧ 0-6ರ ಅಂತರದಲ್ಲಿ ಸೋಲು ಅನುಭವಿಸಿದರು.

 

 

 

ಅಗ್ರ ಶ್ರೇಯಾಂಕಿತರಾದ ಕೊರಿಯಾದ ಕಿಮ್ ಜೆಡಾಕ್, ಜಿನ್ ಹಿಯಾಕ್ ಹಾಗೂ ಕಿಮ್ ವೂಜಿನ್ ವಿರುದ್ಧ ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ಭಾರತದ ತಂಡವು ನಿರಾಸೆಗೊಳಗಾಯಿತು.

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಆರ್ಚರಿ ಪುರುಷರ ತಂಡವು ಇದಕ್ಕೂ ಮೊದಲು ಕಜಕಿಸ್ತಾನ ವಿರುದ್ಧ 6-2ರಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ತಂಡ ವಿಭಾಗದಲ್ಲಿ ಭಾರತದ ಪದಕದ ಕನಸು ಕಮರಿದೆ. ಈಗ ವೈಯಕ್ತಿಕ ವಿಭಾಗದಲ್ಲಿ ಸೆಣಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು